ಉಡುಪಿ: ಬುಕ್ ಸ್ಟಾಲ್, ಮೊಬೈಲ್ ಅಂಗಡಿ ತೆರೆಯಲು ಅನುಮತಿ
ಉಡುಪಿ: ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವಶ್ಯಕವಾಗಿರುವ ಪುಸ್ತಕ, ಪೆನ್ನು ಮತ್ತು ಸ್ಟೇಶನರಿ ವಸ್ತುಗಳು, ಮೊಬೈಲ್, ಮೊಬೈಲ್ ರಿಪೇರಿ ಹಾಗೂ accessories ಗಳನ್ನು ಖರೀದಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜೂನ್ 16ರಂದು (ಬುಧವಾರ) ಒಂದು ದಿನದ ಮಟ್ಟಿಗೆ ಬುಕ್ಸ್ಟಾಲ್/ಸ್ಟೇಷನರಿ ಹಾಗೂ ಮೊಬೈಲ್ ಅಂಗಡಿಗಳನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.