ಪೆರ್ಡೂರು: ಬಸ್ ನಿರ್ವಾಹಕ ಕೊಲೆ ಪ್ರಕರಣ, ಮತ್ತೋರ್ವ ಆರೋಪಿ ಬಂಧನ

ಉಡುಪಿ: ಪೆರ್ಡೂರು ಸಮೀಪದ ಬೈರಂಪಳ್ಳಿ ದೂಪದಕಟ್ಟೆ ಹುಣ್ಸೆ ಬಾಕೇರ್ ನಿವಾಸಿ, ಬಸ್‌ ಕಂಡಕ್ಟರ್ ಪ್ರಶಾಂತ್ ಪೂಜಾರಿ (38) ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಅಲಂಗಾರು ಗರಡಿ ಸಮೀಪದ ನಿವಾಸಿ ಸಚಿನ್ ನಾಯ್ಕ (24) ಎಂಬಾತನನ್ನು ಹಿರಿಯಡಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಮೂರ್ಜೆ ಕ್ರಾಸ್‌ನಲ್ಲಿ ಈತನನ್ನು ವಶಕ್ಕೆ ಪಡೆಯಲಾಗಿದೆ. ಜುಲೈ.11ರಂದು ಮಧ್ಯರಾತ್ರಿ ಮನೆಯ ಆವರಣದಲ್ಲಿ ಕತ್ತಿಯಿಂದ ಕಡಿದು ಪ್ರಶಾಂತ್ ಪೂಜಾರಿ ಅವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣದ ಬಂಧಿತ ಆರೋಪಿ ಕುಕ್ಕೆಹಳ್ಳಿ ಬುಕ್ಕಿಗುಡ್ಡೆ ನಿವಾಸಿ […]

ಮಾ.17: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ

ಉಡುಪಿ: ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಮಾ.17ರಂದು ಶ್ರೀಮನ್ಮಹಾರಥೋತ್ಸವ ನೆರವೇರಲಿದೆ. ದೇಗುಲದ ವಾರ್ಷಿಕ ಮಹೋತ್ಸವದ ಅಂಗವಾಗಿ ಮಾರ್ಚ್  20ರ ವರೆಗೆ ಪ್ರತಿದಿನ ಮಹಾಪೂಜೆ, ಪ್ರಧಾನ ಹೋಮ, ಕಲಶಾಭಿಷೇಕ, ರಂಗಪೂಜೆ ಬಲಿ, ಅಷ್ಟಾವಧಾನ ಸೇವೆಗಳು, ಉತ್ಸವ ಬಲಿ, ಪೂರ್ಣಾಹುತಿ ತೆಪ್ಪೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 18ರಂದು ರಾತ್ರಿ ಆರಾಟೋತ್ಸವ ಹಾಗೂ ಮಾ. 20ರಂದು ಬೆಳಿಗ್ಗೆ ಬ್ರಹ್ಮಕುಂಭಾಭಿಷೇಕ ಜರುಗಲಿದೆ. ಮಾ. 17ರಂದು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ ಎಂದು […]

ಉಡುಪಿಯ ಯುವಕ ನಟಿಸಿರುವ “ಮೀಸೆ ಮತ್ತು ಜಡೆ” ವಿಡಿಯೋ ಸಖತ್ ವೈರಲ್

ಉಡುಪಿ ಜಿಲ್ಲೆಯ ಪೆರ್ಡೂರು ದೂಪದಕಟ್ಟೆ ಮೂಲದ ಯುವಕ ಪ್ರತೀಕ್ ನಟಿಸಿರುವ “ಮೀಸೆ ಮತ್ತು ಜಡೆ” ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದೆನೇ ಸುದ್ದಿಮಾಡುತ್ತಿದೆ. ಈಗಿನ ಯಂಗ್ ಜಮಾನಕ್ಕೆ ಹೇಳಿಮಾಡಿಸಿದ, ಇಷ್ಟವಾಗುವ ದೃಶ್ಯ ಹಾಗೂ ಡೈಲಾಗ್ ಗಳುಳ್ಳ ಈ ವಿಡಿಯೋ ಯುವಜನರ ಸರ್ಕಲ್ ನಲ್ಲಿ ಸಖತ್ ಟ್ರೆಂಡ್ ಆಗುತ್ತದೆ.ನಿರ್ದೇಶಕ ಜ್ಯೋತಿರಾವ್ ಮೋಹಿತ್ ಎನ್ನುವವರು ತಮ್ಮ ಹೊಸ ಸಿನಿಮಾ ಮಾಡಲು ನಿರ್ಮಾಪಕರ ಹುಡುಕಾಟದಲ್ಲಿದ್ದರು. ಈ ಸಂದರ್ಭದಲ್ಲಿ ತಮ್ಮ ಹಾಗೂ ತಂಡದ ಪ್ರತಿಭೆ ತೋರಿಸುವ ಉದ್ದೇಶದಿಂದ “ಮೀಸೆ ಮತ್ತು ಜಡೆ” ಅನ್ನುವ ಕಾಮಿಡಿ […]

ಡಿ.23 :ಪೆರ್ಡೂರಿನಲ್ಲಿ ಕುಲಾಲ ಸಂಭ್ರಮ: ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಕುಲಾಲ ಸಂಘ (ರಿ.) ಪೆರ್ಡೂರು ಉಡುಪಿ ಜಿಲ್ಲೆ ಇದರ ‘ದಶಮಾನೋತ್ಸವ ಕುಲಾಲ ಸಂಭ್ರಮ 2018’ ಬೃಹತ್ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ ಡಿ.23 ರಂದು ಆದಿತ್ಯವಾರ ಪೆರ್ಡೂರು ಬುಕ್ಕಿಗುಡ್ಡೆಯ ಕುಲಾಲ ಸಭಾಭವನದಲ್ಲಿ  ನಡೆಯಲಿರುವುದು. ದಶಮಾನೋತ್ಸವ ಕುಲಾಲ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಶ್ರೀ ಕ್ಷೇತ್ರ ಮಾಣಿಲ ಆವರಣ ಗೋಡೆ ಮತ್ತು ಸಮಾವೇಶ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ, ಸಭಾಭವನದ ನವೀಕೃತ ವೇದಿಕೆಯನ್ನು ಉಸ್ತುವಾರಿ ಸಚಿವೆ ಡಾ.ಜಯಮಾಲಾ ಉದ್ಘಾಟಿಸಲಿದ್ದಾರೆ. ಕುಂಬಾರಿಕೆಯ ಪ್ರಾತ್ಯಕ್ಷಿಕೆಯ […]