ಡಿ.7 ರಂದು ಪಿಂಚಣಿ ಮತ್ತು ತ್ರೈಮಾಸಿಕ ಅಂಚೆ ಅದಾಲತ್
ಉಡುಪಿ: ಅಂಚೆ ಇಲಾಖೆ ವತಿಯಿಂದ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಡಿಸೆಂಬರ್ 7 ರಂದು ಬೆಳಗ್ಗೆ 10 ಗಂಟೆಗೆ ಪಿಂಚಣಿ ಅದಾಲತ್ ಮತ್ತು 11 ಗಂಟೆಗೆ ತ್ರೈಮಾಸಿಕ ಅಂಚೆ ಅದಾಲತ್ ನಡೆಯಲಿದ್ದು, ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಡಿ.5 ರ ಒಳಗೆ ಅಂಚೆ ಅಧೀಕ್ಷಕರ ಕಚೇರಿಗೆ ಸಲ್ಲಿಸಬಹುದಾಗಿದೆ. ಅಂಚೆ ಅದಾಲತ್ ನಡೆಯುವ ದಿನದಂದು ಗ್ರಾಹಕರು ಹಾಜರಿದ್ದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.