ಕುಂದಾಪುರ: ಆದಿಶಕ್ತಿ ಮಠ, ದಕ್ಷಿಣ ಭದ್ರಕಾಳಿ ದೇವಸ್ಥಾನಗಳ ಪ್ರತಿಷ್ಠೆ

ಕುಂದಾಪುರ: ಪ್ರಕೃತಿಯನ್ನು ಮೀರಿ ನಡೆಯುತ್ತೇನೆ ಎನ್ನುವ ಮನುಷ್ಯನ ಭ್ರಮೆಗಳೆಲ್ಲವೂ ಸುಳ್ಳಾಗುತ್ತಿರುವ ನಿದರ್ಶನಗಳು ನಮಗೆ ನಿತ್ಯ ಸತ್ಯವಾಗುತ್ತಿದೆ. ಜಾತಿ ಇಲ್ಲದ ನೀತಿಯ ಬದುಕೇ ನಮ್ಮ ನಿಜವಾದ ಬದುಕಾಗಬೇಕು. ಗರ್ಭಗುಡಿ ಇಲ್ಲದ ಆಶ್ರಮಗಳು ಮಾನವತ್ವದ ಪರಂಪರೆಯನ್ನು ಸಾರುತ್ತದೆ ಎಂದು ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ ಗುರೂಜಿ ಹೇಳಿದರು. ಆನಗಳ್ಳಿ ಹೆಬ್ಬಾರಬೆಟ್ಟುವಿನಲ್ಲಿ ಮಂಗಳವಾರ ನಡೆದ ದತ್ತಾಶ್ರಮ, ಆದಿಶಕ್ತಿ ಮಠ ಹಾಗೂ ದಕ್ಷಿಣ ಭದ್ರಕಾಳಿ ದೇವಸ್ಥಾನಗಳ ಪ್ರತಿಷ್ಠೆ ಹಾಗೂ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು. ಅಹಂಕಾರ ಇರುವ ವ್ಯಕ್ತಿಗಳಿಗೆ ಗುರುವಿನ ಸ್ಥಾನದಲ್ಲಿ […]