ಕುಂದಾಪುರ: ಆದಿಶಕ್ತಿ ಮಠ, ದಕ್ಷಿಣ ಭದ್ರಕಾಳಿ ದೇವಸ್ಥಾನಗಳ ಪ್ರತಿಷ್ಠೆ

ಕುಂದಾಪುರ: ಪ್ರಕೃತಿಯನ್ನು ಮೀರಿ ನಡೆಯುತ್ತೇನೆ ಎನ್ನುವ ಮನುಷ್ಯನ ಭ್ರಮೆಗಳೆಲ್ಲವೂ ಸುಳ್ಳಾಗುತ್ತಿರುವ ನಿದರ್ಶನಗಳು ನಮಗೆ ನಿತ್ಯ ಸತ್ಯವಾಗುತ್ತಿದೆ. ಜಾತಿ ಇಲ್ಲದ ನೀತಿಯ ಬದುಕೇ ನಮ್ಮ ನಿಜವಾದ ಬದುಕಾಗಬೇಕು. ಗರ್ಭಗುಡಿ ಇಲ್ಲದ ಆಶ್ರಮಗಳು ಮಾನವತ್ವದ ಪರಂಪರೆಯನ್ನು ಸಾರುತ್ತದೆ ಎಂದು ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ ಗುರೂಜಿ ಹೇಳಿದರು.

ಆನಗಳ್ಳಿ ಹೆಬ್ಬಾರಬೆಟ್ಟುವಿನಲ್ಲಿ ಮಂಗಳವಾರ ನಡೆದ ದತ್ತಾಶ್ರಮ, ಆದಿಶಕ್ತಿ ಮಠ ಹಾಗೂ ದಕ್ಷಿಣ ಭದ್ರಕಾಳಿ ದೇವಸ್ಥಾನಗಳ ಪ್ರತಿಷ್ಠೆ ಹಾಗೂ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು.

ಅಹಂಕಾರ ಇರುವ ವ್ಯಕ್ತಿಗಳಿಗೆ ಗುರುವಿನ ಸ್ಥಾನದಲ್ಲಿ ಮಾರ್ಗದರ್ಶನ ನೀಡುವ ಅರ್ಹತೆ ಇರೋದಿಲ್ಲ. ಸಮಾಜದ ಶೋಷಿತ ವ್ಯಕ್ತಿಗಳಲ್ಲಿ ದೇವರನ್ನು ಕಾಣುವವರಲ್ಲಿ ಧರ್ಮ ಸತ್ವಗಳು ಇರುತ್ತದೆ. ಕರ್ಮ ಪರಿಪಾಲನೆ ಮಾಡುವ ವ್ಯಕ್ತಿಗಳಿಂದ ಸಮಾಜದಲ್ಲಿ ಧರ್ಮ ಪರಿಪಾಲನೆಯಾಗುತ್ತದೆ ಎಂದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಾಲಾಡಿ ತಟ್ಟವಟ್ಟು ಜ್ಯೋತಿಷಿ ವಾಸುದೇವ ಜೋಯಿಸ, ಕಣ್ಣೂರು ಮಡಾಯಿಕಾವು ಭದ್ರಕಾಳಿ ದೇವಸ್ಥಾನದ ಎ.ಕೆ.ಮುರಳಿ, ಶಿವಪ್ಪಣ್ಣ ಗೌರಿಗದ್ದೆ, ನವದೆಹಲಿ ಜೂನಾ ಅಖಾಡದ ಮಹಂತ ಅಗಸ್ತ್ಯಗಿರಿ, ಮಹಾಮಂಡಲೇಶ್ವರ ವಿನೀತ್‌ಗಿರಿ , ಮಹಾಂತ್‌ರೋಶನ್‌ಗಿರಿ, ಮಹಂತ ನಾರಾದಾನಂದಪುರಿ, ಆದೀನಾಥ ಪ್ರೇಮನಾಥ, ಥಾಣಾಪತಿ ಗೋಪಾಲಗಿರಿ, ಮಹಂತ ರಾಮನಾಥದಾಸ್‌ಜೀ, ಮಹಂತ ಹನುಮಾನ್‌ದಾಸ್‌ಜೀ, ಮಹಂತ ನಾರಾಯಣದಾಸ್‌ಜೀ, ಅಭೀರಾಮ್‌ದಾಸ್‌ಜೀ, ಅಂಗದಾಸ್‌ಜೀ, ಉದ್ಯಮಿ ಗುರ್ಮೆ ಸುರೇಶ್‌ಶೆಟ್ಟಿ ಹಾಗೂ ಬೇಳೂರು ರಾಘವೇಂದ್ರ ಶೆಟ್ಟಿ, ಸುಭಾಸ್‌ಪೂಜಾರಿ ಸಂಗಮ್‌ಹಾಗೂ ಫರ್ವಿನಾ ಸುಭಾಸ್‌ಪೂಜಾರಿ ಆನಗಳ್ಳಿ, ಹರೀಶ್‌ ತೋಳಾರ್‌ ಕೊಲ್ಲೂರು ಇದ್ದರು.

ಶಿವಪ್ಪಣ್ಣ, ಗೀತಕ್ಕ, ಚಂದ್ರಶೇಖರ ಜಯಪುರ, ಶೃಂಗೇಶ್ವರಿ ರಾಯರು ಗೌರಿಗದ್ದೆ, ಜಯಂತ್‌ಭಟ್, ಡಿವೈಎಸ್‌ಪಿ ಬಿ.ಪಿ.ದಿನೇಶ್‌ಕುಮಾರ, ಸರ್ಕಲ್‌ಇನ್ಸ್‌ಪೆಕ್ಟರ್‌ಮಂಜಯ್ಯ, ಎಸ್.ಐ ಹರೀಶ್‌ಕುಮಾರ, ಸುರೇಶ್‌ನಾಯಕ್, ಹರೀಶ್‌ತೋಳಾರ್, ಸುರೇಶ್‌ಮೇಸ್ತ್ರಿ, ಸತೀಶ್‌ಪೂಜಾರಿ ಇಂಜಿನಿಯರ್, ಮನೋಹರ್, ಸುರೇಶ್ ಸಾಸ್ತಾನ, ಶ್ರೀನಿವಾಸ, ವಿಜಯ್, ಸುಭಾಸ್, ರಾಜೇಂದ್ರ ಅವರನ್ನು ಗೌರವಿಸಲಾಯಿತು.

ಆನಗಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ನಾಯ್ಕ್ ಸ್ವಾಗತಿಸಿದರು, ಪತ್ರಕರ್ತ ರಾಜೇಶ್ ಕುಂದಾಪುರ ನಿರೂಪಿಸಿದರು, ರಾಜೇಂದ್ರ ಸಂಗಮ್ ವಂದಿಸಿದರು.