ಗೋ-ವೃಷಭಗಳು ತಂದೆ ತಾಯಿಗೆ ಸಮಾನನೀಲಾವರ ಗೋಗ್ರಾಸ ಕಾರ್ಯಕ್ರಮದಲ್ಲಿ ಪೇಜಾವರಶ್ರೀ ಅಭಿಮತ

ನೀಲಾವರ: ಗೋವು ಮತ್ತು ವೃಷಭಗಳು ತಂದೆ ತಾಯಿಗೆ ಸಮಾನ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶನಿವಾರ ನೀಲಾವರ ಕಾಮಧೇನು ಗೋಶಾಲೆಯಲ್ಲಿ ಉಡುಪಿ ಭಾರತೀಶ ಜ್ಯುವೆಲ್ಲರ್ಸ್ ಮಾಲಕ ಶಶಿಧರ ಭಟ್ ನೇತೃತ್ವದಲ್ಲಿ ಬಂಧುಗಳೊಂದಿಗೆ ನಡೆದ ಗೋಗ್ರಾಸ ಕಾರ್ಯಕ್ರಮ ಸಂದರ್ಭ ಆಶೀರ್ವಚನ ನೀಡಿ ಮಾತನಾಡಿ, ತಮ್ಮ ಜನ್ಮ ದಿನ ಮತ್ತು ಇನ್ನಿತರ ಸಂಭ್ರಮದ ದಿನಗಳನ್ನು ಗೋ ಸೇವೆ ಮಾಡುವುದರ ಮೂಲಕ ಆಚರಿಸಿಕೊಂಡು ಕೃತಾರ್ಥರಾಗಬೇಕು. ಶಶಿಧರ ಭಟ್ ಕಾರ್ಯ ಇತರರಿಗೆ ಮಾದರಿ ಎಂದರು. […]

ಮತಾಂತರ ಮತ್ತು ಗೋಹತ್ಯಾ ನಿಷೇಧ ಕಾಯ್ದೆ ವಾಪಸ್ ಪಡೆಯುವುದು ಅತ್ಯಂತ ಕಳವಳಕಾರಿ: ಪೇಜಾವರ ಶ್ರೀ

ಉಡುಪಿ: ಹಿಂದಿನ ಸರ್ಕಾರವು ಸಮಾಜದಲ್ಲಿ ಏರ್ಪಟ್ಟಿದ್ದ ಗೊಂದಲ ಪರಿಹಾರಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಮತ್ತು ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಪ್ರಸ್ತುತ ಸರ್ಕಾರವು ಈ ಎರಡೂ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದ್ದು ಇದು ಅತ್ಯಂತ ಕಳವಳಕಾರಿ ವಿಚಾರ. ರಾಜ್ಯ ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಕಾಯ್ದೆ ಹಿಂಪಡೆಯುವ ದುಸ್ಸಾಹಸ ಮಾಡಬಾರದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ. ಸರ್ಕಾರವು ಕಾನೂನು ಹಿಂಪಡೆಯುವ ದುಸ್ಸಾಹಸ ಮಾಡಬಾರದು. […]

ಬೆಕ್ಕಿನ ಮರಿಯನ್ನು ರಕ್ಷಿಸಲು 40 ಅಡಿ ಆಳದ ಬಾವಿಗೆ ಇಳಿದ ಪೇಜಾವರ ಸ್ವಾಮೀಜಿ

ಉಡುಪಿ: ಮುಚ್ಲಕೋಡಿನ ದೇವಸ್ಥಾನದಲ್ಲಿ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಲು ಖುದ್ದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಾವಿಗಿಳಿದಿರುವ ಘಟನೆ ನಡೆದಿದೆ. ಭಾನುವಾರದಂದು ಸ್ವಾಮೀಜಿಗಳು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬೆಕ್ಕಿನ ಮರಿ 40 ಅಡಿ ಆಳದ ಬಾವಿಗೆ ಬಿದ್ದಿರುವುದನ್ನು ಕಂಡಿದ್ದಾರೆ. ಬೆಕ್ಕಿನ ಮರಿಯನ್ನು ಮೇಲೆತ್ತಲು ಬಕೆಟ್ ಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟಿದ್ದರೂ ಬೆಕ್ಕಿನ ಮರಿಗೆ ಬಕೆಟ್ ಒಳಗೆ ಬರಲು ಆಗಿರಲಿಲ್ಲ. ಕಟ್ಟಕಡೆಗೆ ಸ್ವಾಮೀಜಿಯವರೇ ಹಗ್ಗದ ಸಹಾಯದಿಂದ ಬಾವಿಗಿಳಿದು ಬೆಕ್ಕಿನ ಮರಿಯನ್ನು ಮೇಲೆತ್ತಿ ರಕ್ಷಿಸಿದ್ದಾರೆ.