ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಯುಗದ ಋಷಿ: ಯೋಗಗುರು ಬಾಬಾ ರಾಮ್ ದೇವ್
ಉಡುಪಿ: ಭಾರತದ ಧೀಮಂತ ಅಧ್ಯಾತ್ಮಿಕ ಪರಂಪರೆ ಮತ್ತು ಆರ್ಷ ಸಂಸ್ಕೃತಿಯ ಎಲ್ಲ ಶ್ರೇಷ್ಠ ಗುಣ ವಿಶೇಷಗಳ ಅಪೂರ್ವ ಸಂಗಮವಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೇವಲ ಓರ್ವ ಸಾಮಾನ್ಯ ಸಂತರಾಗಿರದೇ ಯುಗದ ಋಷಿಗಳಾಗಿದ್ದರು ಎಂದು ಯೋಗ ಗುರು ಬಾಬಾ ರಾಮ್ ದೇವ್ ಬಣ್ಣಿಸಿದ್ದಾರೆ. ಶ್ರೀ ವಿಶ್ವೇಶತೀರ್ಥ ಸೇವಾ ಸಂಘದ ಸಂಯೋಜನೆಯಲ್ಲಿ ನಾಡಿನ ಅನೇಕ ಗಣ್ಯರಿಂದ ಶ್ರೀಗಳವರ ಒಡನಾಟಗಳನ್ನು ಸ್ಮರಿಸಿಕೊಳ್ಳುವ ಪ್ರಯುಕ್ತ ನಡೆಯುತ್ತಿರುವ ಶ್ರೀ ವಿಶ್ವೇಶ ವಿಶ್ವದರ್ಶನ ಎಂಬ ಆನ್ ಲೈನ್ ಉಪನ್ಯಾಸ ಸರಣಿಯಲ್ಲಿ ರಾಮ್ ದೇವ್ ಜೀ […]