ಇಂದಿನಿಂದ ನಾಡಿನಾದ್ಯಂತ ದಶಕೋಟಿ ರಾಮ ಜಪಯಜ್ಞ: ಪೇಜಾವರ ಶ್ರೀ
ಉಡುಪಿ: ಅಧಿಕ ಮಾಸದಲ್ಲಿ ಅಯೋಧ್ಯಾ ರಾಮನ ಕೃಪೆಗಾಗಿ ಜುಲೈ 18 ರಿಂದ ನಾಡಿನಾದ್ಯಂತ ದಶಕೋಟಿ ರಾಮ ಜಪಯಜ್ಞಕ್ಕೆ ಪೇಜಾವರ ಶ್ರೀಗಳು ಕರೆ ಕೊಟ್ಟಿದ್ದಾರೆ. ಈ ವರ್ಷ ಅಧಿಕಮಾಸ ಬಂದಿದೆ, ಮಂಗಳವಾರದಿಂದ ಒಂದು ತಿಂಗಳ ಕಾಲ ಅಧಿಕ ಶ್ರಾವಣಮಾಸ ಇರಲಿದೆ. ಈ ಸಂದರ್ಭದಲ್ಲಿ ದೇವತಾ ಪ್ರೀತ್ಯರ್ಥವಾಗಿ ಮಾಡುವ ಯಾವುದೇ ಸತ್ಕರ್ಮಗಳಿಗೆ ಅತ್ಯಧಿಕ ಫಲ ದೊರೆಯಲಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಪುರುಷೋತ್ತಮ ಮಾಸವೆಂದೇ ಕರೆಯಲ್ಪಡುವ ಈ ಅಧಿಕ ಮಾಸದಲ್ಲಿ ರಾಮನನ್ನು ನೆನೆಯೋಣ. ನಾಡಿನಾದ್ಯಂತ ಅಯೋಧ್ಯಾಪತಿ […]
ತಿರುಮಲ: ಪೇಜಾವರಮಠದ ನವೀಕರಣಗೊಳ್ಳಲಿರುವ ಶಾಖೆ ಉಡುಪಿಮಠದ ಶಿಲಾನ್ಯಾಸ
ತಿರುಮಲ: ಪ್ರಸಿದ್ಧ ಕ್ಷೇತ್ರದಲ್ಲಿರುವ ಪೇಜಾವರ ಮಠದ ಶಾಖೆ ಉಡುಪಿಮಠ ವನ್ನು ಯಾತ್ರಿಗಳ ಅನುಕೂಲಕ್ಕಾಗಿ ನವೀಕರಣಗೊಳಿಸಲಾಗುತ್ತಿದೆ. ನೂತನ ಕಟ್ಟಡಕ್ಕೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ಬೆಳಿಗ್ಗೆ ಸುಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಿ ಶುಭ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಮಠದ ಅಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು. ಸುಮಾರು ಒಂದೂವರೆ ವರ್ಷದೊಳಗೆ ನೂತನ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಅಲ್ಲಿಯ ತನಕ ಯಾತ್ರಿಗಳಿಗೆ ಉಡುಪಿ ಮಠವು ಲಭ್ಯವಿರುವುದಿಲ್ಲ.
ಸಂತ ಮಂಥನದಲ್ಲಿ ಭಾಗಿಯಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ
ಉಡುಪಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಚುನಾವಣಾ ಪ್ರವಾಸ ನಿಮಿತ್ತ ಉಡುಪಿಗೆ ಆಗಮಿಸಿದ ಸಂದರ್ಭ ಶ್ರೀಕೃಷ್ಣ ದೇವರ ದರ್ಶನ ಪಡೆದು ಬಳಿಕ ಪೇಜಾವರ ಮಠದ ಸಭಾಂಗಣದಲ್ಲಿ “ಸಂತ ಮಂಥನ” ಎನ್ನುವ ಕಾರ್ಯಕ್ರಮದಲ್ಲಿ ಕರಾವಳಿ ಭಾಗದ ಅನೇಕ ಮಠಾಧೀಶರೊಂದಿಗೆ ಸಮಾಲೋಚನೆಯನ್ನು ನಡೆಸಿದರು. ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಅನೇಕ ಮಠಾಧೀಶರು ಭಾಗವಹಿಸಿದ್ದರು. ಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಮೂರ್ತಿ ಆಚಾರ್ಯ,ಕೃಷ್ಣ ಭಟ್,ಇಂದುಶೇಖರ ಹೆಗಡೆ ಮೊದಲಾದವರು ನಡ್ಡಾರವರನ್ನು ಗೌರವದಿಂದ […]
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನಾ ಕಾರ್ಯಕ್ರಮ
ಉಡುಪಿ: ರಥಬೀದಿಯ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೆಯು ನಡೆಯಿತು. ಭಾನುವಾರ ಮುಂಜಾನೆಯಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ವಿಷ್ಣುಸಹಸ್ರನಾಮ ಪಾರಾಯಣ ನಡೆದವು. ಸಂಸ್ಕೃತ ಮಹಾಪಾಠಶಾಲೆಯ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣ ಆಚಾರ್ಯ ಹಾಗೂ ವಿದ್ವಾಂಸಹೆರ್ಗ ರವೀಂದ್ರ ಭಟ್ ಗುರುಗಳ ಸಂಸ್ಮರಣೆ ಮಾಡಿದರು. ಶ್ರೀ ಮಠದ ವಿದ್ವಾಂಸ ರಾಮಚಂದ್ರ ಭಟ್ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀಪಾದರ ಪಾದುಕೆಗೆ ಅರ್ಘ್ಯ ಪಾದ್ಯಾದಿಗಳನ್ನು ನೀಡಿ ಪುಷ್ಪಾರ್ಚನೆ ಮಾಡಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಠಕ್ಕೆ ಆಗಮಿಸಿ ನಮನವನ್ನು ಸಲ್ಲಿಸಿದರು. ಈ […]
ಸಾಮಾಜಿಕ ಬದ್ದತೆಯನ್ನು ಹೊಂದಿರುವ ಮಹಾಲಕ್ಷ್ಮೀ ಬ್ಯಾಂಕಿನ ಸಾಧನೆ ಸರ್ವರಿಗೂ ಪ್ರೇರಣೆಯಾಗಲಿ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಉಡುಪಿ: ಆರೋಗ್ಯವಂತ ದೇಹಕ್ಕೆ ರಕ್ತನಾಳಗಳು ಯಾವ ರೀತಿ ಅವಶ್ಯವೋ ಅದೇ ರೀತಿ ಸಮಾಜದಲ್ಲಿ ಸದೃಢ ಆರ್ಥಿಕ ವ್ಯವಸ್ಥೆಯ ನಿರ್ಮಾಣಕ್ಕೆ ನರನಾಡಿಯಂತೆ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ಕೂಡಾ ಅವಶ್ಯ. ಕರಾವಳಿ ಜಿಲ್ಲೆಯಲ್ಲಿ ಶಿಸ್ತುಬದ್ಧ ಕಾರ್ಯವೈಖರಿಯಿಂದ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ನಿರಂತರ ಪ್ರಗತಿ ದಾಖಲಿಸುತ್ತಿರುವ ಮಹಾಲಕ್ಷ್ಮೀ ಬ್ಯಾಂಕ್ ಸಾಧನೆ ಅಭಿನಂದನಾರ್ಹ ಎಂದು ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ಉಡುಪಿ ಅಜ್ಜರಕಾಡಿನ ಕಲ್ಮಂಜೆ ಟವರ್ಸ್ ನಲ್ಲಿ ಮಹಾಲಕ್ಷ್ಮೀ ಬ್ಯಾಂಕಿನ ವಿಸ್ತರಿತ ಆಡಳಿತ ಕಚೇರಿಯ […]