ನವೆಂಬರ್ 5ರೊಳಗೆ ಮೊರಾಟೋರಿಯಂ ಚಕ್ರಬಡ್ಡಿ ಹಣವನ್ನು ವಾಪಸ್ ಸಾಲಗಾರರ ಖಾತೆಗೆ ಪಾವತಿಸಿ: ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಸಾಲ ಮರುಪಾವತಿ ಅವಧಿ ವಿಸ್ತರಣೆ (ಲೋನ್ ಮೊರಾಟೋರಿಯಂ) ಯಲ್ಲಿ ಸಾಲದ ಮೇಲೆ ಪಾವತಿಸಿಕೊಂಡಿರುವ ಚಕ್ರಬಡ್ಡಿಯನ್ನು ವಾಪಸ್ ಅರ್ಹ ಸಾಲಗಾರರ ಖಾತೆಗಳಿಗೆ ನವೆಂಬರ್ 5ರೊಳಗೆ ನೀಡುವಂತೆ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಇದನ್ನು ಉಲ್ಲೇಖಿಸಿದೆ. 2 ಕೋಟಿ ರೂಪಾಯಿ ಮೊತ್ತದ ಸಾಲಗಳಿಗೆ ವಿಧಿಸಲಾಗಿರುವ, ಆರ್ ಬಿಐ ಸಾಲ ಮರುಪಾವತಿ ಅವಧಿ ವಿಸ್ತರಣೆ ಯೋಜನೆಯಡಿ ಬರುವ ಚಕ್ರ ಬಡ್ಡಿಗಳಿಗೆ ಈ ನಿಯಮ ಅನ್ವಯವಾಗಲಿದೆ. ಹಣವನ್ನು […]