ಸಾಲಿಗ್ರಾಮ ಪ.ಪಂ.: ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಜುಲೈ 26: ಜಿಲ್ಲೆಯಲ್ಲಿ ಮಳೆಗಾಲವು ಈಗಾಗಲೇ ಆರಂಭವಾಗಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗದಂತೆ ಸಾಕಷ್ಟು ಮುಂಜಾಗೃತೆ ವಹಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ವ್ಯಾಪಾರಸ್ತರು ಪ್ಲಾಸ್ಟಿಕ್‍ನ್ನು ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಚರಂಡಿಗೆ ಕಸಕಡ್ಡಿಗಳನ್ನು/ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಿಸಾಡುವುದನ್ನು ನಿಷೇಧಿಸಲಾಗಿದ್ದು, ಗೂಡಂಗಡಿ ಮಾಲೀಕರು ಉಪಯೋಗಿಸಿದ ಬೊಂಡವನ್ನು ಅದೇ ದಿನ ವಿಲೇವಾರಿ ಮಾಡಲು ಸೂಚಿಸಿದೆ. ಕೆಲವೆಡೆ ಈಗಾಗಲೇ ಡೆಂಗ್ಯೂ ರೋಗ ಕಾಣಿಸಿದ್ದು, ಡೆಂಗ್ಯೂ ಖಾಯಿಲೆಯು ವೈರಸ್ ರೋಗಾಣುವಿನಿಂದ ಉಂಟಾಗುವುದು ಮತ್ತು ಈಡೀಸ್ ಸೊಳ್ಳೆಗಳು ಕಚ್ಚುವುದರಿಂದ ರೋಗವು ಒಬ್ಬರಿಂದ […]

ಸಾಲಿಗ್ರಾಮ: ಕಸಗಳನ್ನು ಮೂಲದಲ್ಲಿಯೇ ವಿಂಗಡಿಸಲು ಸೂಚನೆ

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಪ್ರತೀ ನಾಗರೀಕರು ಘನ ತ್ಯಾಜ್ಯವನ್ನು  ಮೂಲದಲ್ಲಿಯೇ ಹಸಿಕಸ, ಒಣಕಸ, ಅಪಾಯಕಾರಿ ಕಸವನ್ನಾಗಿ ಬೇರ್ಪಡಿಸಿ, ಹಸಿಕಸವನ್ನು ತಮ್ಮ ತಮ್ಮ ಸ್ವಂತ ಸ್ಥಳದಲ್ಲಿ ಪೈಪ್ ಕಾಂಪೋಸ್ಟ್, ಪಿಟ್‍ಕಾಂಪೋಸ್ಟ್ ಮೂಲಕ ವಿಲೇವಾರಿಗೊಳಿಸುವಂತೆ ಹಾಗೂ ಒಣಕಸವನ್ನು ಸಂಗ್ರಹಿಸಿ ಪ್ರತಿ 15 ದಿನಕ್ಕೊಮ್ಮೆ ಪಟ್ಟಣ ಪಂಚಾಯತ್‍ ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡುವುದು. ಡೈಪರ್ಸ್, ಸ್ಯಾನಿಟರಿ ಪ್ಯಾಡ್ ಇತ್ಯಾದಿಗಳನ್ನು ಪೇಪರ್ ನಲ್ಲಿ ಸುತ್ತಿ ಪ್ರತ್ಯೇಕವಾಗಿ ನೀಡತಕ್ಕದ್ದು ಹಾಗೂ ಅಪಾಯಕಾರಿ ವಸ್ತುಗಳು, ಎಲೆಕ್ಟ್ರಾನಿಕ್ ಸಾಮಾನುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡುವುದು ಕಡ್ಡಾಯವಾಗಿದ್ದು, ಈ […]

ಸಾಲಿಗ್ರಾಮ ಪ.ಪಂ: ಆಸ್ತಿ ತೆರಿಗೆ ದಂಡ ರಹಿತ ಪಾವತಿ

ಉಡುಪಿ, ಜೂನ್ 15: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಸ್ತವ್ಯ, ವಾಣಿಜ್ಯ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲೀಕರು, ಅನುಭೋಗದಾರರು 2019-20 ನೇ ಸಾಲಿನ ಆಸ್ತಿ ತೆರಿಗೆ ದಂಡ ರಹಿತವಾಗಿ ಪಾವತಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ. 2019-20 ನೇ ಸಾಲಿನ ತೆರಿಗೆ ಪಾವತಿಸದೇ ಬಾಕಿ ಇರುವವರು ದಂಡನೆ ಸಮೇತ ತೆರಿಗೆ ಪಾವತಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಲಿಗ್ರಾಮ ಪ.ಪಂ: ವಸತಿ ನಿರ್ಮಾಣಕ್ಕೆ ಸಹಾಯಧನ

ಉಡುಪಿ, ಜೂನ್ 4: 2018-19 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ಸರಕಾರದಿಂದ 20 ಮನೆಗಳ ಗುರಿಯನ್ನು ನಿಗದಿಪಡಿಸಲಾಗಿದ್ದು, ಹೊಸ ಮನೆ ನಿರ್ಮಿಸಲು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರುವ ವಸತಿ ರಹಿತರು ಮನೆ ನಿರ್ಮಿಸಲು ಸಹಾಯ ಧನ ಪಡೆಯಬಹುದಾಗಿರುತ್ತದೆ. ಆಸಕ್ತರು ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಜೂನ್ 30 ರ ಒಳಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್‍ಗೆ ದಾಖಲೆ ಸಮೀತ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸದ್ದಾರೆ.