ಪುತ್ತಿಗೆ ಶ್ರೀಪಾದರಿಂದ ಚತುರ್ಥ ಪರ್ಯಾಯ ಪ್ರಯುಕ್ತ ಸಂಚಾರ

ಮುಂಬೈ: ಮಹಾರಾಷ್ಟ್ರದ ನಾಶಿಕ್ ನಗರದಲ್ಲಿ ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಚತುರ್ಥ ಪರ್ಯಾಯ ಪ್ರಯುಕ್ತ ಸಂಚಾರ ನಡೆಯಿತು. ಈ ಸಂದರ್ಭದಲ್ಲಿ ಉಭಯ ಶ್ರೀಪಾದರು ನಾಶಿಕ್ ನಗರದ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಇಸ್ಕಾನ್ ಭಕ್ತರು ಉಭಯ ಶ್ರೀಪಾದರನ್ನು ವೈಭವದಿಂದ ಬರಮಾಡಿಕೊಂಡು, ಶ್ರೀಪಾದರಿಗೆ ಗೌರವ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ಇಸ್ಕಾನ್ ಭಕ್ತರು ಶ್ರೀಪಾದರಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದುಕೊಂಡರು.

ಪರ್ಯಾಯ ಅಕ್ಕಿ ಮುಹೂರ್ತ ಪೂರ್ವ ಭಾವಿ ಚಿಂತನಾ ಸಭೆ

ಮುಂಬರುವ ಉಡುಪಿಯ ಶ್ರೀಕೃಷ್ಣಪೂಜಾ ಪರ್ಯಾಯವನ್ನು ನೆರವೇರಿಸಲಿರುವ ಭಾವಿ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥರ ಆದೇಶದಂತೆ ಮೇ 17 ರಂದು ಪುತ್ತಿಗೆ ಮಠದಲ್ಲಿ ಪೂರ್ವಭಾವಿ ಚಿಂತನಾ ಸಭೆಯು ಸ್ಥಳೀಯ ವಿವಿಧ ಸಂಘದ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹವ್ಯಕ ಸಭಾ, ಬಿಲ್ಲವ ಸಮಾಜ, ಮೊಗವೀರ ಸಮಾಜ, ವಿಶ್ವಕರ್ಮ ಸಮಾಜ, ಕುಲಾಲ ಸಂಘ ಜೋಗಿ ಸಮಾಜ, ತುಳು ಕೂಟ ,ಜಿ.ಎಸ್.ಬಿ ಸಮಾಜಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀಕೃಷ್ಣಮಠದಲ್ಲಿ ಸಂಗೀತ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ, ವಿದುಷಿ ವೈಷ್ಣವಿ ಆನಂದ್ ಸಿಂಗಾಪುರ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಶ್ರೀಕೃಷ್ಣಮಠದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಉಡುಪಿ: ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ,ನೃತ್ಯ ವಿದುಷಿ ಮಂಜರಿಚಂದ್ರ ಪುಷ್ಪರಾಜ್ ಇವರ ಶಿಷ್ಯೆ ಕುಮಾರಿ ಎಸ್.ಅನಘಶ್ರೀ ಇವರಿಂದ ನೃತ್ಯಾಭಿವಂದನ ಅಂಗವಾಗಿ ಭರತನಾಟ್ಯ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ಕಲಾವಿದರಾದ ಕೋಟ ಭಗವತ್ ಭಜನಾ ತಂಡದಿಂದ ಕೋಲಾಟ ನೃತ್ಯ ಮತ್ತು ಉದಯಾಸ್ತಮಾನ ಭಜನಾ ಕಾರ್ಯಕ್ರಮಗಳು ನಡೆದವು.