ಪರೀಕ: ಸಿಡಿಲು ಬಡಿದು ತಂದೆ-ಮಗ ಗಂಭೀರ

ಮಣಿಪಾಲ: ನಾಗದೇವರಿಗೆ ತನು ಹಾಕಲು ಹೋಗುತ್ತಿದ್ದ ವೇಳೆ ಸಿಡಿಲು ಬಡಿದು ತಂದೆ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆ ಆತ್ರಾಡಿ ಸಮೀಪದ ಪರೀಕ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಗಂಭೀರ ಗಾಯಗೊಂಡವರನ್ನು ಪರೀಕದ ನಿವಾಸಿ ಸೋಮನಾಥ ಶೆಟ್ಟಿ ಎಂದು ಗುರುತಿಸಲಾಗಿದೆ. ಅವರು ಇಂದು ಬೆಳಿಗ್ಗೆ ಮಗನೊಂದಿಗೆ ಮನೆಯ ನಾಗಬನಕ್ಕೆ ತನು ಹಾಕಲು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ಸಿಡಿಲು ಬಡಿದಿದ್ದು, ಇದರಿಂದ ಇಬ್ಬರಿಗೂ ಗಂಭೀರ ಗಾಯವಾಗಿದೆ. ಗಾಯಗೊಂಡ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.