777 ಚಾರ್ಲಿ ಚಿತ್ರದ ಯಶಸ್ಸಿಗೆ ಮತ್ತೊಂದು ಗರಿ: ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಸ್ತಿಗೆ ಭಾಜನರಾದ ಕಿರಣ್ ರಾಜ್ ಕೆ
ಕನ್ನಡದ ಭರವಸೆಯ ನಿರ್ದೇಶಕರಲ್ಲಿ ಒಬ್ಬರಾದ ಕಿರಣ್ ರಾಜ್ ಕೆ ತಮ್ಮ ಚೊಚ್ಚಲ ನಿರ್ದೇಶನದಲ್ಲಿಯೇ ತಾವೇನನ್ನುವುದನ್ನು ತೋರಿಸಿಕೊಟ್ಟಿದ್ದರು. ಜಗತ್ತಿನಾದ್ಯಂತ ಪ್ರಾಣಿಪ್ರೇಮಿಗಳನ್ನು ಆಕರ್ಷಿಸಿದ 777 ಚಾರ್ಲಿ ಚಿತ್ರದ ಶ್ರೇಯಸ್ಸು, ಚಾರ್ಲಿಗೆ ಎಷ್ಟು ಸಲ್ಲಬೇಕೋ ಈ ಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ ಕಿರಣ್ ರಾಜ್ ಗೂ ಅಷ್ಟೇ ಸಲ್ಲಬೇಕು. ಈ ಚಿತ್ರದಲ್ಲಿನ ಅವರ ಶ್ಲಾಘನೀಯ ಕಾರ್ಯವನ್ನು ಗುರುತಿಸಿ, ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದ 13 ನೇ ಆವೃತ್ತಿಯು ಕಿರಣ್ ರಾಜ್ ಕೆ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಬಗ್ಗೆ […]
ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಮೇಕಿಂಗ್ ಫೋಟೋ ಬಿಡುಗಡೆ
ಹೇಮಂತ್ ಎಂ ರಾವ್ ಕಥೆ ಮತ್ತು ನಿರ್ದೇಶನ ಹಾಗೂ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ಮಾಣದ ‘ಸಪ್ತ ಸಾಗರದಾಚೆ ಎಲ್ಲೋ’ ಚಲನಚಿತ್ರವು ಸೆಟ್ಟೇರಿದ್ದು, ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಸಿನಿಮಾದ ಮೇಕಿಂಗ್ ಫೋಟೋಗಳನ್ನು ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ‘ಮನು’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಹೊಸತನದೊಂದಿಗೆ ಬರುವ ರಕ್ಷಿತ್ ಈ ಬಾರಿ ಹೊಸತೇನನ್ನು ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಕ್ಷಿತ್‌ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ […]