ಉಡುಪಿ ಬಳಿಕ ಉ.ಪ್ರ. ಗಾಜಿಪುರದ ಮೆಡಿಕಲ್ ಕಾಲೇಜಿನಲ್ಲೂ ವೀಡಿಯೋ ಪ್ರಕರಣ: ದೂರು ದಾಖಲಿಸಿದ ಸಂತ್ರಸ್ತೆಯರು; ತನಿಖೆ ಚುರುಕು
ಲಕ್ನೋ: ಇತ್ತೀಚಿಗೆ ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಾಶ್ ರೂಂ ನಲ್ಲಿ ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಣ ಮಾಡಿದ ಸುದ್ದಿಯ ಬೆನ್ನಲ್ಲೇ ಅದೇ ಮಾದರಿಯ ಮತ್ತೊಂದು ಪ್ರಕರಣ ದೇಶದ ಇನ್ನೊಂದು ರಾಜ್ಯದಿಂದ ವರದಿಯಾಗಿದೆ. ಉತ್ತರ ಪ್ರದೇಶದ ಗಾಜಿಪುರದ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ಫೋಟೋಗಳು ಮತ್ತು ವೀಡಿಯೋಗಳನ್ನು ಚಿತ್ರೀಕರಿಸಿರುವ ಆರೋಪಕ್ಕೆ ಗುರಿಯಾಗಿದ್ದಾಳೆ. ಕಾಲೇಜಿನ ಮೊದಲನೆ ವರ್ಷದ ವಿದ್ಯಾರ್ಥಿನಿಯನ್ನು ಮಂತಾಶಾ ಕಾಜ್ಮಿ ಎಂದು ಗುರುತಿಸಲಾಗಿದ್ದು, ತನ್ನ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಅಕ್ಷೇಪಾರ್ಹ […]