ಪಂಡಿತ್ ದೀನದಯಾಳ್ ಉಪಾಧ್ಯಾಯ ಜೀವನಾದರ್ಶ, ಬಲಿದಾನ ಸದಾ ಸ್ಮರಣೀಯ: ಶೋಭಾ ಕರಂದ್ಲಾಜೆ

ಉಡುಪಿ: ಪಂಡಿತ್ ದೀನದಯಾಳ್ ಉಪಾಧ್ಯಾಯರವರು ದೇಶಕ್ಕಾಗಿ ಬದುಕಿದವರು. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಅದೆಷ್ಟು ಬುದ್ಧಿವಂತರಾಗಿದ್ದರೂ ಯಾವುದೇ ಉದ್ಯೋಗವನ್ನು ಅರಸದೆ ತನ್ನ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯನ್ನು ಪಡೆದು ಅದರ ಸೂಚನೆಯ ಮೇರೆಗೆ ಭಾರತೀಯ ಜನ ಸಂಘಕ್ಕೆ ಬಂದು ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ನಿಧನದ ನಂತರ ದೇಶಾದ್ಯಂತ ತನ್ನ ಜವಾಬ್ದಾರಿಯನ್ನು ಹೊತ್ತುಕೊಂಡು ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಕುತಂತ್ರಿಗಳ ಷಡ್ಯಂತ್ರದ ಪಿತೂರಿಗೆ ಬಲಿಯಾದರು. ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜೀವನಾದರ್ಶ, ಬಲಿದಾನ ಸದಾ ಸ್ಮರಣೀಯ ಎಂದು ಕೇಂದ್ರ ಕೃಷಿ […]