ಚಿತ್ರನಟ ಉಪೇಂದ್ರ ನಿವಾಸಕ್ಕೆ ಪಲಿಮಾರು ಮಠ ಶ್ರೀವಿದ್ಯಾಧೀಶ ತೀರ್ಥರಿಂದ ಭೇಟಿ
ಉಡುಪಿ: ಚಿತ್ರನಟ ಉಪೇಂದ್ರ ಅವರ ಆಹ್ವಾನದ ಮೇರೆಗೆ ಪಲಿಮಾರು ಮಠದ ಹಿರಿಯ ಶ್ರೀಗಳಾದ ಶ್ರೀವಿದ್ಯಾಧೀಶ ಸ್ವಾಮೀಜಿ ಅವರು ತಮ್ಮ ಶಿಷ್ಯವೃಂದದೊಂದಿಗೆ ಅವರ ಮನೆಗೆ ತೆರಳಿದರು. ಉಪೇಂದ್ರ ಅವರು ಕೇಳಿದ ಆಧ್ಯಾತ್ಮದ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀಗಳು, ಉಪೇಂದ್ರ ಅವರನ್ನು ರಜತಪೀಠಪುರಕ್ಕೆ ಹಾಗೂ ಪಲಿಮಾರಿನ ಮೂಲ ಮಠಕ್ಕೆ ಭೇಟಿ ನೀಡುವಂತೆ ಆಹ್ವಾನವಿತ್ತರು. ಮಠದ ಪಿ.ಆರ್.ಓ ಕಡೆಕಾರು ಶ್ರೀಶ ಭಟ್, ಗಿರೀಶ್ ಉಪಾಧ್ಯಾಯ, ಶ್ರೀನಿವಾಸ ಭಟ್ ಮತ್ತಿತರು ಉಪಸ್ಥಿತರಿದ್ದರು.