ಪುರಾತನ ‘ಪಕ್ಷಿಕೆರೆ’ ಗೆ ಪುನರುಜ್ಜೀವನ: ಪೇಪರ್ ಸೀಡ್ ಕಂಪನಿ ಪ್ರವರ್ತಕರಿಂದ ಒಂದೊಳ್ಳೆ ಕಾರ್ಯ
ಹಳೆಯಂಗಡಿ: ಇಲ್ಲಿಗೆ ಸಮೀಪದ ಪಕ್ಷಿಕೆರೆಯೆಂಬ ಊರು ಒಂದು ಕಾಲದಲ್ಲಿ ಆರಕ್ಕಿಂತಲೂ ಹೆಚ್ಚು ಕೆರೆಗಳನ್ನು ಹೊಂದಿದ್ದು, ಹಲವಾರು ಪಕ್ಷಿಗಳು ಈ ಕೆರೆಗಳಲ್ಲಿ ತಮ್ಮ ಬಾಯಾರಿಕೆ ತಣಿಸಿಕೊಳ್ಳುತ್ತಿದ್ದುದರಿಂದ ಈ ಸ್ಥಳಕ್ಕೆ ಪಕ್ಷಿಕೆರೆ ಎಂದೇ ಹೆಸರು ಬಂದಿತ್ತು. ಆದರೆ ಕೆರೆಗಳ ಬೀಡಾಗಿದ್ದ ಈ ಊರಿನಲ್ಲಿ ಈಗ ಹೇಳಿಕೊಳ್ಳುವುದಕ್ಕೂ ಒಂದೂ ಕೆರೆ ಇಲ್ಲ ಎಂಬಂತಾಗಿದೆ. ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಕೊಯಿಕುಡೆ ಎಂಬ ಪ್ರದೇಶವು ಪಕ್ಷಿಕೆರೆ ಎಂದು ಹೆಸರುವಾಸಿಯಾಗಿದ್ದು, ಇಲ್ಲಿ 77 ಸೆಂಟ್ಸ್ ವಿಸ್ತೀರ್ಣದ ಸುಮಾರು ಹತ್ತು ಅಡಿ ಆಳದ ಕೆರೆಯೊಂದು ಶಿಥಿಲಾವಸ್ಥೆಯಲ್ಲಿದ್ದು, ಇದನ್ನು […]