365 ಶತಕೋಟಿ ಡಾಲರ್ ಮಾರುಕಟ್ಟೆ ಬಂಡವಾಳದೊಂದಿಗೆ ಪಾಕಿಸ್ತಾನದ ಸಂಪೂರ್ಣ ಆರ್ಥಿಕತೆಗಿಂತ ದೊಡ್ಡದಾಗಿ ಬೆಳೆದು ನಿಂತ ಟಾಟಾ ಗ್ರೂಪ್

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಹಲವಾರು ಟಾಟಾ ಗ್ರೂಪ್ ಕಂಪನಿಗಳು ಹೆಚ್ಚಿನ ಆದಾಯವನ್ನು ನೀಡುವುದರೊಂದಿಗೆ, ಉಪ್ಪಿನಿಂದ ಸಾಫ್ಟ್‌ವೇರ್ ವರೆಗಿನ ಟಾಟಾ ಕಂಪನಿಗಳ ಸಮೂಹ ಮಾರುಕಟ್ಟೆ ಮೌಲ್ಯವು ನೆರೆಯ ಪಾಕಿಸ್ತಾನದ ಸಂಪೂರ್ಣ ಆರ್ಥಿಕತೆಯನ್ನು ಮೀರಿಸುವಷ್ಟು ದೊಡ್ಡದಾಗಿ ಬೆಳೆದಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಕೊನೆಯ ಎಣಿಕೆಯಲ್ಲಿ, ಭಾರತದ ಅತಿದೊಡ್ಡ ವ್ಯಾಪಾರ ಸಂಸ್ಥೆಯ(TATA Group) ಮಾರುಕಟ್ಟೆ ಬಂಡವಾಳೀಕರಣವು $365 ಶತಕೋಟಿ ಅಥವಾ ರೂ. 30.3 ಲಕ್ಷ ಕೋಟಿಯಷ್ಟಿದ್ದರೆ, IMF ಪ್ರಕಾರ ಪಾಕಿಸ್ತಾನದ ಜಿಡಿಪಿ ಸುಮಾರು $341 ಬಿಲಿಯನ್ ಎಂದು […]

ಇರಾನ್-ಪಾಕಿಸ್ತಾನ ಮುಖಾಮುಖಿ: ಇರಾನ್ ಮೇಲೆ ಪ್ರತಿದಾಳಿ ನಡೆಸಿದ ಪಾಕಿಸ್ತಾನ

ಇಸ್ಲಾಮಾಬಾದ್:‌ ತನ್ನ ಭಯೋತ್ಪಾದಕ ನೆಲೆಗಳ ಮೇಲೆ ವಾಯುದಾಳಿ ನಡೆಸಿದ ಇರಾನ್‌ ಮೇಲೆ ಪ್ರತಿದಾಳಿ ಮಾಡುವ ಮೂಲಕ ಪಾಕಿಸ್ತಾನವು ಸೇಡು ತೀರಿಸಿಕೊಂಡಿದೆ. ಪಾಕಿಸ್ತಾನದಲ್ಲಿರುವ ಜೈಶ್‌ ಅಲ್‌ ಅದ್ಲ್‌ ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವೂ ವಾಯುದಾಳಿ ಮೂಲಕ ಪ್ರತ್ಯುತ್ತರ ನೀಡಿದೆ. ಇರಾನ್‌ನಲ್ಲಿರುವ ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ನೆಲೆಗಳ ಮೇಲೆ ಪಾಕಿಸ್ತಾನವು ಗುರುವಾರ (ಜನವರಿ 18) ವಾಯುದಾಳಿ ನಡೆಸಿದೆ. “ಪಾಕಿಸ್ತಾನ ಕೂಡ ಇರಾನ್‌ ಮೇಲೆ ವಾಯುದಾಳಿ ನಡೆಸಿದೆ. ಪ್ರತ್ಯೇಕ ಬಲೂಚಿಸ್ತಾನಕ್ಕೆ ಬೇಡಿಕೆ ಇಟ್ಟಿರುವ […]