ಪ್ರೇಯಸಿಗೆ ಚೂರಿ ಇರಿದು, ಗುಂಡಿಕ್ಕಿ ಕೊಲೆಗೈದ ಪಾಗಲ್ ಪ್ರೇಮಿ
ಜೈಪುರ: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿ ಇನ್ನೊಬ್ಬ ಯುವಕನ ಜೊತೆ ಇದ್ದ ವಿಚಾರ ತಿಳಿದು ಆಕೆಗೆ ಚೂರಿ ಇರಿದು, ಗುಂಡಿಕ್ಕಿ ಕೊಂದ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ. ಯುವತಿ ಪರೀಕ್ಷೆ ಮುಗಿಸಿ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಯುವಕರಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಮಧ್ಯದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.