ಪಡುಬಿದ್ರಿ: ರೈಲು ಡಿಕ್ಕಿ ಹೊಡೆದು ಯುವಕ ಸಾವು

ಪಡುಬಿದ್ರಿ: ರೈಲು ಢಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಪಲಿಮಾರು ರೈಲ್ವೇ ಗೇಟ್ ಬಳಿ ನಡೆದಿದೆ. ಕವತ್ತಾರು ನಿವಾಸಿ ನಾಗೇಶ್ ಪೂಜಾರಿ (39) ಎಂದು ಮೃತ ದುರ್ದೈವಿ.‌ ಈತ ಪತ್ನಿ ಮರಣದ ಬಳಿಕ ಮಾಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಇಂದು ಪಲಿಮಾರು ಹೊಯಿಗೆ ಮಲ್ಲಮಾರ್ ಎಂಬಲ್ಲಿ ರೈಲ್ವೇ ಹಳಿಯ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ರೈಲೊಂದು ಢಿಕ್ಕಿಯಾಗಿದೆ. ಇದರಿಂದ ತೀವ್ರ ಗಾಯಗೊಂಡ ನಾಗೇಶ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.