ಪಡುಬಿದ್ರಿ: ಪಲಿಮಾರು ನಿವಾಸಿ ಆತ್ಮಹತ್ಯೆಗೆ ಶರಣು
ಪಡುಬಿದ್ರಿ: ಕೋಣೆಯ ಮರದ ಜಂತಿಗೆ ನೇಣು ಬಿಗಿದುಕೊಂಡು ಪಲಿಮಾರು ಗ್ರಾಮದ ನಿವಾಸಿ ದೀಪಕ್ ದೇವಾಡಿಗ(30) ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೀಪಕ್ ಕಳೆದ ಒಂದು ತಿಂಗಳಿನಿಂದ ಎಲ್ಲೂರಿನ ಯುಪಿಸಿಎಲ್ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದರು. ಅ. 16 ರಂದು ಮನೆಯಲ್ಲಿ ಊಟ ಮಾಡಿದ ಬಳಿಕ ಕೋಣೆಗೆ ಹೋಗಿ ಮಲಗುವುದಾಗಿ ಹೇಳಿ ಹೋದವರು, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.