ಪಡುಬಿದ್ರಿ ಬಾರ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು
ಪಡುಬಿದ್ರಿ: ಬಾರ್ ಮ್ಯಾನೇಜರ್ ಒಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಡ್ವೆ ಲಾಡ್ಜ್ ನಲ್ಲಿ ನಡೆದಿದೆ. ಪಡುಬಿದ್ರಿಯ ಡೌನ್ ಟೌನ್ ಬಾರ್ ನ ಮ್ಯಾನೇಜರ್ ಸುರೇಶ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಮೂಲತಃ ನಿಟ್ಟೆಯ ನಿವಾಸಿಯಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.