ಬನ್ನಾಡಿ ದಿ. ಪದ್ದು ಆಚಾರ್ ಸ್ಮರಣಾರ್ಥ ಉಚಿತ ನೋಟ್ಸ್ ಪುಸ್ತಕ, ಸಮವಸ್ತ್ರ ಹಾಗೂ ವಿಶೇಷ ಚೇತನರಿಗೆ ಸಹಾಯಧನ ವಿತರಣೆ
ಕುಂದಾಪುರ: ಬನ್ನಾಡಿ ದಿ.ಪದ್ದು ಆಚಾರ್ ಸ್ಮರಣಾರ್ಥ ಮಕ್ಕಳಾದ ಬಿ.ನಾರಾಯಣ ಆಚಾರ್(ಒ.ಎನ್.ಜಿ.ಸಿ ನಿವೃತ್ತ) ಮತ್ತು ಶ್ರೀದೇವಿ ಜ್ಯುವೆಲ್ಲರ್ಸ್ ಕೋಟ-ಸಾಲಿಗ್ರಾಮ ಮಾಲೀಕರಾದ ಸೀತಾರಾಮ ಆಚಾರ್ ಬನ್ನಾಡಿ ಇವರಿಂದ ಪರಮಹಂಸ ಖಾ.ಹಿ.ಪ್ರಾ ಶಾಲೆಯ ಎಲ್ಲ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ, ಲೇಖನ ಸಾಮಗ್ರಿಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಇದರೊಂದಿಗೆ ದಿ.ಪದ್ದು ಆಚಾರ್ ಸ್ಮರಣಾರ್ಥ ಆರೋಗ್ಯ ಉಪಕೇಂದ್ರ ವಡ್ಡರ್ಸೆ ಇವರಿಗೆ ಔಷಧಿ ಮತ್ತು ವಿಶೇಷ ಚೇತನರಿಗೆ ಧನಸಹಾಯ ವಿತರಣಾ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ಬನ್ನಾಡಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ […]