ಹೊಸ ಅವತಾರದಲ್ಲಿ ಸುನೀಲ್ ಶೆಟ್ಟಿ: ಧಾರಾವಿ ಬ್ಯಾಂಕ್ ಒಟಿಟಿ ಸರಣಿಯಲ್ಲಿ ‘ತಲೈವನ್’ ಆದ ಬಾಲಿವುಡ್ ನ ಅಣ್ಣ!
ಬಾಲಿವುಡ್ ನಲ್ಲಿ “ಅಣ್ಣ” ಎಂದೇ ಪ್ರಖ್ಯಾತರಾದ ಸುನಿಲ್ ಶೆಟ್ಟಿಯವರು ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸುನೀಲ್ ಶೆಟ್ಟಿ ಅವರು ಎಂಎಕ್ಸ್ ಪ್ಲೇಯರ್ ಒಟಿಟಿಯಲ್ಲಿ ‘ಧಾರಾವಿ ಬ್ಯಾಂಕ್’ ಸರಣಿಯೊಂದಿಗೆ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಈ ಸರಣಿಯನ್ನು ಸಮಿತ್ ಕಕ್ಕಡ್ ಅವರು ನಿರ್ದೇಶಿಸಿದ್ದಾರೆ. ಧಾರಾವಿ ಬ್ಯಾಂಕ್ ಸರಣಿಯಲ್ಲಿ ಸುನಿಲ್ ‘ತಲೈವನ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ಕೂಡಾ ನಟಿಸಲಿದ್ದಾರೆ. ನಟಿ ಸೋನಾಲಿ ಕುಲಕರ್ಣಿ ಪ್ರಮುಖ ಪಾತ್ರದಲ್ಲಿದ್ದಾರೆ. ಧಾರಾವಿ […]
ಒಟಿಟಿಗೆ ಬರಲಿದೆ ಜಲ್ಲಿಕಟ್ಟು ಆಧಾರಿತ ‘ಪೆಟ್ಟೈಕಾಲಿ’ ವೆಬ್ ಸರಣಿ: ಟ್ರೈಲರ್ ಹಂಚಿಕೊಂಡ ಕನ್ನಡಿಗ ಕಿಶೋರ್
ಖ್ಯಾತ ನಿರ್ದೇಶಕ ವೆಟ್ರಿ ಮಾರನ್ ಅವರ ‘ಪೆಟ್ಟೈಕಾಲಿ’, ತಮಿಳುನಾಡಿನ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ಆಧರಿಸಿದ ಮೊದಲ ವೆಬ್ ಸರಣಿ, ಈ ವರ್ಷ ದೀಪಾವಳಿಯಿಂದ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ವೆಟ್ರಿ ಮಾರನ್ ಅವರ ‘ಪೆಟ್ಟೈಕಾಳಿ’ ಚಿತ್ರವನ್ನು ಅವರ ಬಹುಕಾಲದ ಸಹಾಯಕ ರಾಜ್ ಕುಮಾರ್ ನಿರ್ದೇಶಿಸಿದ್ದಾರೆ. ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿರುವ ಈ ಸರಣಿಯು ಒಟಿಟಿ ಪ್ಲಾಟ್‌ಫಾರ್ಮ್ ಆಹಾ ತಮಿಳಿನಲ್ಲಿ ತೆರೆಕಾಣಲಿದೆ. ಈ ಸರಣಿಯು ಪ್ರೇಕ್ಷಕರನ್ನು ಹಿಂದೆಂದೂ ನೋಡಿರದ ಆಳವಾದ ಜಲ್ಲಿಕಟ್ಟು ಜಗತ್ತಿನೊಳಗೆ ತೆಗೆದುಕೊಂಡು ಹೋಗಲಿದೆ ಎಂದು ನಿರೀಕ್ಷಿಸಲಾಗಿದೆ. ತುಳುನಾಡಿನ […]