ನಾಳೆ ಅಮೆಜಾನ್ ಪ್ರೈಮ್ ವೀಡಿಯೋನಲ್ಲಿ ಕಾಂತಾರ ಬಿಡುಗಡೆ

ಜಗತ್ತಿನಾದ್ಯಂತ ಸದ್ದು ಮಾಡಿ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ಕಾಂತಾರ ಚಿತ್ರ ಅಮೆಜಾನ್ ಪ್ರೈಮ್ ವೀಡಿಯೋ ನಲ್ಲಿ ನಾಳೆ ಬಿಡುಗಡೆ ಹೊಂದುತ್ತಿದೆ. ಚಿತ್ರದ ಹಕ್ಕನ್ನು ಪಡೆಯಲು ಅಮೆಜಾನ್ ಪ್ರೈಮ್ ಎಷ್ಟು ಬೆಲೆ ತೆತ್ತಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಇನ್ನು ಎಲ್ಲಿ ಯಾವಾಗ ಬೇಕಿದ್ದರೂ ಕಾಂತಾರ ಚಲನಚಿತ್ರವನ್ನು ಕುಳಿತಲ್ಲಿಂದಲೇ ನೋಡಬಹುದು.