ಚಿನ್ನದ ಹುಡುಗನ ಮತ್ತೊಂದು ಪರಾಕ್ರಮ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ನಲ್ಲಿ ಮತ್ತೊಮ್ಮೆ ಚಿನ್ನ ಬಾಚಿದ ನೀರಜ್ ಚೋಪ್ರಾ

ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಭಾನುವಾರ ಮತ್ತೊಮ್ಮೆ ಇತಿಹಾಸ ಬರೆದಿದ್ದು, ಪುರುಷರ ಜಾವೆಲಿನ್ ಫೈನಲ್‌ನಲ್ಲಿ 88.17 ಮೀಟರ್ ದೂರ ಎಸೆದು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪದಕ ಸಮಾರಂಭದ ನಂತರ, ಚೋಪ್ರಾ ಜೂಮ್ ನಲ್ಲಿ ತಡರಾತ್ರಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ತಾವು ಶ್ರೇಷ್ಠ ಕ್ರೀಡಾಪಟುವೇ ಎಂದು ಮಾಧ್ಯಮದವರು ಕೇಳಿದಾಗ, ಅವರು ವಿಶ್ವ ದಾಖಲೆ ಹೊಂದಿರುವ ಜಾನ್ ಜೆಲೆಜ್ನಿ ಹೆಸರನ್ನು ಉಲ್ಲೇಖಿಸಿ, “ನಾನು ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳುವುದಿಲ್ಲ. […]