ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗದಾನ: 7 ರೋಗಿಗಳಿಗೆ ಜೀವದಾನ
ಮಣಿಪಾಲ: 21 ವರ್ಷದ ಉಲ್ಲಾಸ್ ಆರ್ ಎಂಬವರಿಗೆ ಏ. 22 ರಂದು ಭದ್ರಾವತಿ ತಾಲೂಕಿನ ಚೆನ್ನಗಿರಿಯಲ್ಲಿ ರಸ್ತೆ ಅಪಘಾತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಏ.23 ರಂದು ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭದ್ರಾವತಿ ತಾಲೂಕಿನ ಕೆಂಚನಹಳ್ಳಿ ಗ್ರಾಮ, ನೀರಗುಂಡಿ ಅಂಚೆಯ ರಾಜಪ್ಪ ಇವರ ಮಗನಾದ ಉಲ್ಲಾಸ್ ಅಪಘಾತದ ಪರಿಣಾಮದಿಂದ ತೀವ್ರವಾಗಿ ಗಾಯಗೊಂಡಿದ್ದು, ವೈದ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಉಲ್ಲಾಸ್ ಅವರನ್ನು ಎರಡು ಬಾರಿ […]
ಮಂಗಳೂರು: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಪರಿವಾರದಿಂದ ಅಂಗಾಂಗ ದಾನ
ಮಂಗಳೂರು: ಅಪಘಾತದ ನಂತರ ಮೆದುಳು ನಿಷ್ಕ್ರಿಯಗೊಂಡ 37 ವರ್ಷದ ಅಪಘಾತ ಸಂತ್ರಸ್ತರ ಅಂಗಾಂಗಗಳನ್ನು ಆತನ ಪರಿವಾರದವರ ಸಮ್ಮತಿಯ ಮೇರೆಗೆ ಅವಶ್ಯವಿದ್ದವರಿಗೆ ದಾನ ಮಾಡಲಾಗಿದೆ. ಮಂಗಳೂರಿನ ಫಾ. ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೋಮವಾರದಂದು ಶಸ್ತ್ರಚಿಕಿತ್ಸೆ ನಡೆಸಿ, ಅಂಗಾಗಗಳನ್ನು ಇತರ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಮೂಡಿಗೆರೆಯ ಹೊರಟ್ಟಿ ಗ್ರಾಮದ ಧನ್ಯಕುಮಾರ್ ಹೆಚ್ ಎಂ ಎಂಬವರು ಡಿ.8ರಂದು ಸಬ್ಬೇನಹಳ್ಳಿಯಲ್ಲಿ ಬೈಕ್ ಅಪಘಾತಕ್ಕೀಡಾಗಿದ್ದು, ಡಿ.9ರಂದು ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆತನ ತಲೆಗೆ ತೀವ್ರ ಗಾಯವಾಗಿತ್ತು. ಧನ್ಯಕುಮಾರ್ ಚಿಕಿತ್ಸೆಗೆ ಸ್ಪಂದಿಸದಿದ್ದಾಗ ವೈದ್ಯರು ಅವರ ಮೆದುಳು […]
ಐಎಂಎ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಮಧುಮೇಹ ತಪಾಸಣೆ ಮತ್ತು ಅಂಗದಾನದ ಬಗ್ಗೆ ಮಾಹಿತಿ ಶಿಬಿರ
ಉಡುಪಿ: ವಿಶ್ವ ಮಧುಮೇಹ ದಿನಾಚರಣೆಯ ಹಾಗೂ ರಾಷ್ಟ್ರೀಯ ಅಂಗಾಗ ದಾನ ದಿನಾಚಣೆಯ ಅಂಗವಾಗಿ ಭಾನುವಾರದಂದು ಐ.ಎಮ್.ಎ ಉಡುಪಿ ಕರಾವಳಿ ಮತ್ತು ಲಯನ್ಸ್ ಕ್ಲಬ್ ಬ್ರಹ್ಮಾವರ ಜಂಟಿ ಸಹಯೋಗದಲ್ಲಿ ಜನಸಾಮಾನ್ಯರಿಗೆ ಮಧುಮೇಹ ಮತ್ತು ಅಂಗಾಗದಾನದ ಬಗ್ಗೆ ಮಾಹಿತಿ ಮತ್ತು ತಪಾಸಣಾ ಶಿಬಿರವನ್ನು ಐ.ಎಮ್.ಎ ಭವನ ಉಡುಪಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ.ಅಶೋಕ್ ಕುಮಾರ್ ವೈಜಿ ಇವರು ಉಧ್ಘಾಟಿಸಿ ಮಧುಮೇಹದ ಶೀಘ್ರ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು. ಬ್ರಹ್ಮಗಿರಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಲಯನ್ ಉಮೇಶ್ ನಾಯಕ್, […]