ಸೆಪ್ಟೆಂಬರ್ 17 ಅನ್ನು ‘ಹೈದರಾಬಾದ್ ವಿಮೋಚನಾ ದಿನ’ವನ್ನಾಗಿ ಆಚರಿಸಲು ಕೇಂದ್ರದ ನಿರ್ಧಾರ: ಆಪರೇಷನ್ ಪೊಲೋ ಹುತಾತ್ಮರಿಗೆ ನಮನ

ನವದೆಹಲಿ: ಪ್ರತಿ ವರ್ಷ ಸೆಪ್ಟೆಂಬರ್ 17 ಅನ್ನು ‘ಹೈದರಾಬಾದ್ ವಿಮೋಚನಾ ದಿನ’ ಎಂದು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಪ್ರಕಟಿಸಿದೆ. ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಪಡೆದ ನಂತರವೂ ಹೈದರಾಬಾದ್ 13 ತಿಂಗಳ ಕಾಲ ನಿಜಾಮರ ಆಳ್ವಿಕೆಯಲ್ಲಿತ್ತು ಮತ್ತು ನಂತರದವರೆಗೂ ಸ್ವಾತಂತ್ರ್ಯವನ್ನು ಪಡೆಯಲಿಲ್ಲ ಎಂದು ಸಚಿವಾಲಯ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 17, 1948 ರಂದು ‘ಆಪರೇಷನ್ ಪೋಲೋ’ ಎಂದು ಕರೆಯಲ್ಪಡುವ ಪೊಲೀಸ್ ಕಾರ್ಯಾಚರಣೆ ಬಳಿಕ ಈ ಪ್ರದೇಶವನ್ನು ನಿಜಾಮರ […]