1984ರ ಅಪರೇಷನ್ ಮೇಘದೂತ್ ಸಮಯದಲ್ಲಿ ಸಿಯಾಚಿನ್‌ನಲ್ಲಿ ಕಾಣೆಯಾದ ಸೈನಿಕನ ಅವಶೇಷ 38 ವರ್ಷಗಳ ನಂತರ ಪತ್ತೆ

ಲಡಾಖ್: ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನಲ್ಲಿರುವ ಸಿಯಾಚಿನ್ ಗ್ಲೇಸಿಯರ್ ಅನ್ನು ವಶಪಡಿಸಿಕೊಂಡ ಮೂವತ್ತೆಂಟು ವರ್ಷಗಳ ನಂತರ, ಭಾರತೀಯ ಸೇನೆಯು 1984 ರಲ್ಲಿ ಆಪರೇಷನ್ ಮೇಘದೂತ್ ಸಮಯದಲ್ಲಿ ಕಾಣೆಯಾಗಿದ್ದ ತನ್ನ ಸೈನಿಕರೊಬ್ಬರ ಅವಶೇಷಗಳನ್ನು ಸೋಮವಾರ ಪತ್ತೆಮಾಡಿದೆ. ಪತ್ತೆಯಾದ ಸೈನಿಕನ ಅವಶೇಷವು19 ಕುಮಾಊಂ ರೆಜಿಮೆಂಟಿನ 20 ಸದಸ್ಯರ ಆರ್ಮಿ ಗಸ್ತಿನ ಭಾಗವಾಗಿದ್ದ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಸಿಂಗ್ ಅವರದ್ದು ಎಂದು ಗುರುತಿಸಿ, ಉಧಮ್‌ಪುರ ಮೂಲದ ಡಿಫೆನ್ಸ್ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಅಭಿನವ್ ಅವರು ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇ […]