ಮುಂದಿನ ತಿಂಗಳವರೆಗೆ ಏರುಗತಿಯಲ್ಲಿರಲಿದೆ ಈರುಳ್ಳಿ ಬೆಲೆ: ಡಿಸೆಂಬರ್ ವೇಳೆಗೆ ಇಳಿಕೆ ಸಾಧ್ಯತೆ

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಬೆಂಗಳೂರಿನ ಯಶವಂತಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರತಿ ಕಿಲೋಗ್ರಾಂಗೆ ₹ 65-70ರಂತೆ ಈರುಳ್ಳಿ ಮಾರಾಟ ಮಾಡಿದೆ. ನವರಾತ್ರಿಯ ಬಳಿಕ ಈರುಳ್ಳಿ ಬೆಲೆಯು ಸತತ ಏರಿಕೆಯ ಹಾದಿ ತುಳಿದಿದ್ದು, ಸರ್ಕಾರದ ಅಂಕಿಅಂಶಗಳ ಪ್ರಕಾರ, ಈರುಳ್ಳಿಯ ಗರಿಷ್ಠ ಬೆಲೆ ಪ್ರತಿ ಕಿಲೋಗ್ರಾಂಗೆ ₹ 70 ರಷ್ಟಿದ್ದು, ಈ ಏರುಮುಖ ಪ್ರವೃತ್ತಿ ಡಿಸೆಂಬರ್‌ವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಈರುಳ್ಳಿಯ ಒಳಹರಿವು ಕಡಿಮೆಯಾಗಿದ್ದು, ಹೆಚ್ಚಿನ ದರಕ್ಕೆ ಕಾರಣವಾಗುತ್ತದೆ. […]