ಕಾಪು: ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ

ಕಾಪು: ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ವರ್ಷಂಪ್ರತಿ ಜರಗುವ ಚಂಡಿಕಾ ಮಹಾಯಾಗ, ಪೂರ್ಣಾಹುತಿ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಮಂಗಳವಾರದಂದು ನಡೆಯಿತು. ಆ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಮಧ್ಯಾಹ್ನ 11:30ಕ್ಕೆ ಚಂಡಿಕಾಯಾಗ ಮಹಾ ಪೂರ್ಣಾಹುತಿ, ಪಲ್ಲಪೂಜೆ ಹಾಗೂ ಅನ್ನ ಸಂತರ್ಪಣೆ, 3:00 ಗಂಟೆಗೆ ಶ್ರೀ ಮಾರಿಯಮ್ಮ ದೇವಿಗೆ ಪ್ರಸನ್ನ ಪೂಜೆ, ಮೈ ದರ್ಶನ ಸೇವೆ, ಅಭಯ ಪ್ರಸಾದ ವಿತರಣೆ ನಡೆಯಿತು.