ತೈಲ ಬೆಲೆಯಲ್ಲಿ ಮತ್ತೆ ಏರಿಕೆ: ಮುಂಬೈನಲ್ಲಿ ₹100ರ ಗಡಿ ದಾಟಿದ ಪೆಟ್ರೋಲ್

ಮುಂಬೈ: ದೇಶದಲ್ಲಿ ತೈಲ ಬೆಲೆ ಸತತವಾಗಿ‌ ಏರಿಕೆಯಾಗುತ್ತಿದ್ದು, ಮೇ ತಿಂಗಳಲ್ಲೇ ಬರೋಬ್ಬರಿ 15 ಸಲ ತೈಲ ಬೆಲೆ ಹೆಚ್ಚಳವಾಗಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹100 ಗಡಿಯನ್ನು ದಾಟಿದ್ದು, ಡೀಸೆಲ್‌ ದರ ಲೀಟರ್‌ಗೆ ₹92.17ಕ್ಕೆ ಏರಿಕೆಯಾಗಿದೆ. ದೇಶದ ಮಹಾನಗರಗಳಲ್ಲಿ ಪೆಟ್ರೋಲ್‌ ದರವು ಲೀಟರ್‌ಗೆ 26 ಪೈಸೆ ಮತ್ತು ಡೀಸೆಲ್‌ ದರವು ಲೀಟರ್‌ಗೆ 30 ಪೈಸೆ ಹೆಚ್ಚಾಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ ₹93.94 ಆಗಿದೆ. ಡೀಸೆಲ್ […]