ರಾಜ್ಯದಲ್ಲಿ ನಾಳೆ (ಡಿ.14) ಖಾಸಗಿ ಬಸ್ ಬಂದ್ ಇಲ್ಲ: ಕುಯಿಲಾಡಿ
ಉಡುಪಿ: ರಾಜ್ಯದಲ್ಲಿ ನಾಳೆ (ಡಿ.14)ಖಾಸಗಿ ಬಸ್ ಬಂದ್ ಇಲ್ಲ. ಎಂದಿನಂತೆ 8,500 ಬಸ್ ಗಳು ರಾಜ್ಯಾದ್ಯಂತ ಓಡಾಡಲಿವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಕೋಶಾಧಿಕಾರಿ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಸರಕಾರದ ಜೊತೆ ಖಾಸಗಿ ಬಸ್ ಗಳು ಬೆಂಬಲವಾಗಿ ನಿಂತಿವೆ. ನಟರಾಜ್ ಶರ್ಮಾ ಹೇಳಿಕೆಗೂ ನಮಗೂ ಸಂಬಂಧ ಇಲ್ಲ. ರಾಜ್ಯದ ಪ್ರಯಾಣಿಕರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.