ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಗೌರವ ವಂದನೆ ಬೇಡ: ಸಿಎಂ ಬೊಮ್ಮಾಯಿ

ಉಡುಪಿ: ಪೊಲೀಸರು ವಿಮಾನ ನಿಲ್ದಾಣ ಸಹಿತ ಸಾರ್ವಜನಿಕ ಜಾಗಗಳಲ್ಲಿ ಮುಖ್ಯಮಂತ್ರಿ, ವಿಶಿಷ್ಟ ವ್ಯಕ್ತಿಗಳಿಗೆ ಗೌರವ ವಂದನೆ (ಗಾರ್ಡ್ ಆಫ್ ಆನರ್) ಸಲ್ಲಿಸುವುದು ಬೇಡ. ಪೊಲೀಸ್ ಇಲಾಖೆ ಕಾರ್ಯಕ್ರಮಗಳಲ್ಲಷ್ಟೇ ಸಾಕು ಎಂದು ತಿಳಿಸಿದ್ದೇನೆ. ಈ ಬಗ್ಗೆ ಶೀಘ್ರವೇ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು‌. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ನನಗೆ ಶುಭಾಶಯ ಕೋರಿ ಬ್ಯಾನರ್, ಫ್ಲಕ್ಸ್ ಗಳನ್ನು ಹಾಕಬಾರದೆಂದು ನನ್ನ ಪಕ್ಷದವರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದರು. ಹೂವಿನ ವ್ಯಾಪಾರಿಗಳ ಪ್ರತಿಭಟನೆಗೆ […]