ನಿಟ್ಟೆ ತಾಂತ್ರಿಕ ಕಾಲೇಜಿಗೆ ಇಪಿಎಫ್ ಸಂಸ್ಥೆಯಿಂದ ಪ್ರಶಂಸನಾ ಪ್ರಮಾಣಪತ್ರ
ನಿಟ್ಟೆ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯಡಿಯಲ್ಲಿ ಬರುವ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಸಂಸ್ಥೆಯ ಉಡುಪಿ ಘಟಕವು ತಮ್ಮ ವಿಭಾಗದಡಿಯಲ್ಲಿ ದೊಡ್ಡ ಸಂಸ್ಥೆಗಳ ಪೈಕಿ ಇಪಿಎಫ್ ನ ನಿಬಂಧನೆಗಳು ಹಾಗೂ ಯೋಜನೆಗಳನ್ನು ಯಶಸ್ವಿಯಾಗಿಸುವಲ್ಲಿ ಉತ್ತಮಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವನ್ನು ಗುರುತಿಸಿ ಪ್ರಶಂಸನಾ ಪ್ರಮಾಣಪತ್ರ ನೀಡಿದೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಉಡುಪಿ ಇಪಿಎಫ್ ಪ್ರಾದೇಶಿಕ ಕಛೇರಿಯ 70ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಮಾಣಪತ್ರವನ್ನು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ […]
ನಿಟ್ಟೆ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕಿ ಪದ್ಮಾವತಿ ಕೆ ಅವರಿಗೆ ಡಾಕ್ಟರೇಟ್
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕಿ ಪದ್ಮಾವತಿ ಕೆ ಅವರು ‘ಕಂಪ್ಯೂಟರ್ ಏಯ್ಡೆಡ್ ಡಯಗ್ನೋಸಿಸ್ ಬೇಸ್ಡ್ ಆನ್ ಫ್ಯೂಶನ್ ಆಫ್ ಮಲ್ಟಿಮೋಡಲ್ ಡಾಟಾ’ ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ನೀಡಿದೆ. ಇವರು ಬೆಂಗಳೂರಿನ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಮಾಯಾ ವಿ ಕರ್ಕಿ ಅವರ […]
ವಿ.ಟಿ.ಯು ಮಟ್ಟದ ಚೆಸ್ ಚ್ಯಾಂಪಿಯನ್ ಶಿಪ್: ನಾಲ್ಕು ಪ್ರಶಸ್ತಿ ಗೆದ್ದ ನಿಟ್ಟೆ ವಿದ್ಯಾರ್ಥಿಗಳು
ನಿಟ್ಟೆ: ಜೂ. 21 ರಿಂದ 26 ರವರೆಗೆ ಚಿತ್ರದುರ್ಗದ ಎಸ್.ಜೆ.ಎಂ ತಾಂತ್ರಿಕ ಕಾಲೇಜಿನಲ್ಲಿ ನಡೆದ ವಿ.ಟಿ.ಯು ಮಟ್ಟದ ಚೆಸ್ ಚ್ಯಾಂಪಿಯನ್ಶಿಪ್ ನಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಲ್ಕು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿಟ್ಟೆ ಕಾಲೇಜಿನ ಮಹಿಳಾ ಚೆಸ್ ತಂಡವು ರೆಸ್ಟ್ ಆಫ್ ಬೆಂಗಳೂರು ಝೋನ್ ವಿಭಾಗದಲ್ಲಿ ಪ್ರಥಮ ಸ್ಥಾನ, ಇಂಟರ್ ಝೋನ್ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಪುರುಷ ತಂಡವು ರೆಸ್ಟ್ ಆಫ್ ಬೆಂಗಳೂರು ಝೋನ್ ಮತ್ತು ಇಂಟರ್ ಝೋನ್ ವಿಭಾಗಗಳೆರಡರಲ್ಲೂ ದ್ವಿತೀಯ […]