ತಾಂತ್ರಿಕ ಪ್ರಾಜೆಕ್ಟ್ ಸ್ಪರ್ಧೆ: ನಿಟ್ಟೆ ವಿದ್ಯಾರ್ಥಿಗಳ ತಂಡಕ್ಕೆ ಪ್ರತಿಷ್ಠಿತ ಎಫ್.ಪಿ.ಎಸ್.ಐ ಪ್ರಶಸ್ತಿ

ನಿಟ್ಟೆ: ಪ್ರತಿಷ್ಠಿತ ಫ಼್ಲುಯಿಡ್ ಪವರ್ ಸೊಸೈಟಿ ಸಂಘಟಿಸಿದ ತಾಂತ್ರಿಕ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ “ಮ್ಯಾನುವಲ್ ಥರ್ಮೋಫಾರ್ಮರ್ ಮೆಷಿನ್” ಗೆ ಎಂ.ಎಸ್. ಯೋಗನರಸಿಂಹ ಪ್ರೈಜ್ ಫಾರ್ ಇನ್ನೋವೇಶನ್ 2022 ಎಂಬ ಪ್ರಶಸ್ತಿ ವಿಭಾಗದಲ್ಲಿ ದ್ವಿತೀಯ ಬಹುಮಾನ ಲಭಿಸಿದೆ. ಫ್ಲುಯಿಡ್ ಪವರ್ ಚಾಲೆಂಜ್ 2022 ಕಾರ್ಯಕ್ರಮದಲ್ಲಿ ನೀಡಲಾದ ಈ ಬಹುಮಾನವು ರೂ. 5000 ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಜೂನ್ ಮೂರನೇ ವಾರದಲ್ಲಿ ಬೆಂಗಳೂರಿನ ಕ್ಯಾಪಿಟಲ್ ಹೋಟೇಲ್‌ನಲ್ಲಿ […]

ರಾಜ್ಯ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್: ಪ್ರಥಮ ಸ್ಥಾನ ಗಳಿಸಿದ ಕುಮಾರಿ ಶೃತಿ ಎಸ್. ಅಂಚನ್

ನಿಟ್ಟೆ: ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಶೃತಿ ಎಸ್. ಅಂಚನ್, ಮೈಸೂರಿನಲ್ಲಿ ಜೂ. 10 ರಿಂದ 12 ರ ವರೆಗೆ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನ 63 ಕೆಜಿ ಒಳಗಿನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ನಿಟ್ಟೆ ಕಾಲೇಜಿನಲ್ಲಿ 21 ದಿನಗಳ ಯೋಗ ತರಬೇತಿ ಶಿಬಿರ: ಯೋಗ ಉತ್ಸವ

ನಿಟ್ಟೆ: ಯೋಗಾಭ್ಯಾಸವೆಂಬುದು ಪ್ರತಿಯೋವ೯ ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯವೃದ್ಧಿಯಲ್ಲಿ ಬಹಳಷ್ಟು ಉಪಯುಕ್ತವಾದ ಅಂಶವಾಗಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್‌ ಎನ್‌ ಚಿಪ್ಳೂಣ್ಕರ್‌ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಕಾಲೇಜು ಹಾಗೂ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿದ್ಯಾಥಿ೯ನಿಲಯದ ಸಹಯೋಗದಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿರುವ 21 ದಿನಗಳ ಯೋಗ ತರಬೇತಿ ಶಿಬಿರ, ‘ಯೋಗ ಉತ್ಸವ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಜೂ.21 ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಈ ಶಿಬಿರದ ಪ್ರಯೋಜನವನ್ನು […]

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಡಿಜಿಟಲ್ ಉತ್ಪನ್ನ ‘ಐ ಓ ಕ್ಯೂಬ್’ ಬಿಡುಗಡೆ

ನಿಟ್ಟೆ: ನಿಟ್ಟೆಯ ಅಟಲ್ ಇನ್ಕ್ಯುಬೇಷನ್ ಸೆಂಟರ್ ನಲ್ಲಿ ಸ್ಥಾಪಿತವಾಗಿರುವ ಬೆಂಗಳೂರಿನ ಡಿಲೈತ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ‘ಇಂಟರ್ನೆಟ್ ಆಫ್ ಥಿಂಗ್ಸ್’ ಮೇಲಿನ ಒಂದು ಡಿಜಿಟಲ್ ಉತ್ಪನ್ನ ‘ಐ ಓ ಕ್ಯೂಬ್’ ನ್ನು ಜೂ.9 ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಯಿತು. ನಿಟ್ಟೆ ಅಟಲ್ ಇನ್ಕ್ಯುಬೇಷನ್ ಸೆಂಟರನ ಸಿಇಓ ಡಾ. ಅನಂತ ಪದ್ಮನಾಭ್ ಆಚಾರ್, ನಿಟ್ಟೆ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಶೆಟ್ಟಿ, ಇನ್ಫರ್ಮೇಷನ್ ಸೈನ್ಸ್ […]