ನಿಟ್ಟೆಯಲ್ಲಿ ವಿಭಾಗ ಸಂಘಗಳ ಹಾಗೂ ವಿದ್ಯಾರ್ಥಿ ಚಟುವಟಿಕೆಗಳ ಉದ್ಘಾಟನೆ

ಕಾರ್ಕಳ: ಪ್ರತಿಯೊಂದು ಕ್ಷೇತ್ರದಲ್ಲೂ ಸವಾಲುಗಳು ಎದುರಾಗುವುದು ಸಹಜ. ಈ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದರ ಬಗೆಗೆ ಚಿಂತಿಸಬೇಕಷ್ಟೇ ಹೊರತು ಸವಾಲಿಗೆ ಅಂಜಿ ಹಿಂದೆ ಸರಿಯುವ ಪ್ರವೃತ್ತಿ ನಮ್ಮದಾಗಬಾರದು” ಎಂದು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ.ಶ್ರೀಕಾಂತ್ ರಾವ್ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆ.೨೪ ರಂದು ನಡೆದ ೨೦೧೯-೨೦೨೦ ನೇ ಸಾಲಿನ ವಿಭಾಗ ಸಂಘ ಹಾಗೂ ವಿದ್ಯಾರ್ಥಿ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. “ವಿಫುಲ ಉದ್ಯೋಗಾವಕಾಶಗಳ ಬಗೆಗೆ ಚಿಂತಿಸಿ ಇಂಜಿನಿಯರಿಂಗ್ ಶಿಕ್ಷಣವನ್ನು ಕೈಗೆತ್ತಿಕೊಳ್ಳುವ ವಿದ್ಯಾರ್ಥಿಗಳು […]