ನಿಟ್ಟೆಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ:ಸಂಶೋಧನೆ,ಅಭಿವೃದ್ಧಿ ಕುರಿತು ಹೊಸ ನೋಟ ನೀಡಿದ ಕಾರ್ಯಕ್ರಮ

ಕಾರ್ಕಳ: ‘ಇಂದಿನ ದಿನಗಳಲ್ಲಿ ಅಂತರ್ವಿಭಾಗೀಯ (ಇಂಟರ್ ಡಿಸಿಪ್ಲಿನರಿ) ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವುದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಕಾಣುವಂತಾಗಿದೆ. ಪ್ರತಿಯೊಬ್ಬ ಸಂಶೋಧಕನೂ ತನ್ನ ಜ್ಞಾನವನ್ನು ಬೇರೆ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಉಪಯೋಗಿಸಬಹುದು ಹಾಗೂ ಅದರಿಂದ ಇನ್ನುಳಿದ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ಚಿಂತಿಸಬೇಕು’ ಎಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕೆಮಿಸ್ಟ್ರೀ, ಫಿಸಿಕ್ಸ್ & ಮೆಕ್ಯಾನಿಕಲ್ ಇಂಜಿನಿಯರಿಂಗ್ ನ ಪ್ರಾಧ್ಯಾಪಕ ಪ್ರೊ. ಪ್ರಸಾದ್ ಎರ್ಲಗಡ್ಡ ಅಭಿಪ್ರಾಯಪಟ್ಟರು. ಅವರು ಡಿ.೨೨ ಹಾಗೂ ೨೩ ರಂದು […]