ಕಟಪಾಡಿ:ತ್ರಿಶಾ ಸಂಸ್ಥೆ ಅಟಲ್ ಇನ್‌ಕ್ಯೂಬೇಶನ್ ಸೆಂಟರ್, ನಿಟ್ಟೆ ಯೊಂದಿಗೆ ಒಡಂಬಡಿಕೆ
ಕಟಪಾಡಿ:ವಿದ್ಯಾರ್ಥಿಗಳಿಗೆ ಈಗಿನಿಂದಲೇ ವಾಣಿಜ್ಯೋದ್ಯಮದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತ್ರಿಶಾ ಸಂಸ್ಥೆ ಅಟಲ್ ಇನ್‌ಕ್ಯೂಬೇಶನ್ ಸೆಂಟರ್, ನಿಟ್ಟೆ ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಈ ಕಾರ್ಯಕ್ರಮವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನವೆಂಬರ್ 4 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಟಲ್ ಇನ್‌ಕ್ಯೂಬೇಶನ್ ಸೆಂಟರ್ (ಎಐಸಿ) ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರಾದ ಡಾ. ಎ ಪಿ ಆಚಾರ್ ರವರು ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಗಳನ್ನು ವೃದ್ಧಿಸಿಕೊಂಡು ಹೊಸ ಹೊಸ ಆಲೋಚನೆಯೊಂದಿಗೆ ಉದ್ಯಮಿಯಾಗುವ ಕನಸಿದ್ದವರಿಗೆ ಬೇಡಿಕೆ ಹೆಚ್ಚಿದೆ ಎಂದರು. […]
ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ‘ನಿಟ್ಟೆ ಎಕ್ಸ್ ಪ್ರೋ- 2024’
ನಿಟ್ಟೆ: ವಿದ್ಯಾರ್ಥಿಜೀವನದಲ್ಲಿ ವಿವಿಧ ಬಗೆಯ ಸಂಶೋಧನಾ ಪ್ರಯತ್ನಗಳನ್ನು ನಡೆಸುವುದು ಕಲಿಕಾ ಪ್ರಕ್ರಿಯೆಯ ಪ್ರಮುಖ ಅಂಗವಾಗಿದೆ. ಇಂದು ಪ್ರತಿಯೊಬ್ಬನಲ್ಲೂ ವಿಮರ್ಶಾತ್ಮಕ ಚಿಂತನೆಯ ಗುಣ ಇರಬೇಕಾದುದು ಅತಿಮುಖ್ಯ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಸಲಹೆಗಾರ ಹಾಗೂ ತ್ರಿಚಿಯ ಬಿ.ಎಚ್.ಇ.ಎಲ್ ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಗೋಪೀನಾಥ್ ಎಸ್ ಅಭಿಪ್ರಾಯಪಟ್ಟರು. ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಹಳೆವಿದ್ಯಾರ್ಥಿ ಸಂಘ ‘ವಿನಮಿತ’ದ ಸಹಯೋಗದೊಂದಿಗೆ ಸುಮಾರು 32 ವರ್ಷಗಳಿಂದ ನಡೆಸಿಕೊಂಡು ಬಂದಿರುವ ‘ನಿಟ್ಟೆ ಎಕ್ಸ್ ಪ್ರೋ’ ಎಂಬ ಅಂತಿಮ ಬಿ.ಇ ವಿದ್ಯಾರ್ಥಿಗಳ ಪ್ರೊಜೆಕ್ಟ್ […]
ನಿಟ್ಟೆ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜೀವನ್ ಕೆ ಶೆಟ್ಟಿ ಆಯ್ಕೆ
ಕಾರ್ಕಳ: ನಿಟ್ಟೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸುಮಾರು 21 ಸಾವಿರ ಸದಸ್ಯರಿದ್ದ ಹಳೆ ವಿದ್ಯಾರ್ಥಿ ಸಂಘದ 2023-24 ಸಾಲಿನ ನೂತನ ಅಧ್ಯಕ್ಷರಾಗಿ ಮೂಲ್ಕಿಯ ಜೀವನ್ ಕೆ. ಶೆಟ್ಟಿ ಆಯ್ಕೆಯಾಗಿದ್ದಾರೆ. ನಿಟ್ಟೆ ಸಂಸ್ಥೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1996 ರಲ್ಲಿ ನಿಟ್ಟೆ ಮಹಾವಿದ್ಯಾಲಯದಲ್ಲಿ ಬಿ.ಇ(ಸಿವಿಲ್ ಇಂಜಿನಿಯರಿಂಗ್) ಮತ್ತು 2015 ರಲ್ಲಿ ಎಂ.ಟೆಕ್ (ಕನ್ ಸ್ಟ್ರಕ್ಷನ್ ಟೆಕ್ನಾಲಜಿ)ನಲ್ಲಿ ಪದವಿ ಪಡೆದಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲ ಡಾ. ನಿರಂಜನ್ […]