ಸುರತ್ಕಲ್ ಟೋಲ್ ಗೇಟಿಗೆ ಮುತ್ತಿಗೆ: ಪ್ರತಿಭಟನಾಕಾರರ ಬಂಧನ

ಸುರತ್ಕಲ್: ಅಕ್ಟೋಬರ್ 18 ರಂದು ಟೋಲ್ ಗೇಟ್ ವಿರೋಧಿ ಸಮಿತಿಯಿಂದ ಕರೆಯಲಾಗಿದ್ದ ಪ್ರತಿಭಟನೆಯ ಕಾವು ಜೋರಾಗಿದ್ದು, ಹಲವರ ಬಂಧನವಾಗಿದೆ. ಪ್ರತಿಭಟನಾಕಾರರು ಟೋಲ್ ಗೇಟ್ ಮುತ್ತಿಗೆ ತಡೆಯಲು ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ದಾಟಿ ಟೋಲ್ ಗೆ ಮುತ್ತಿಗೆ ಹಾಕಿದ್ದಾರೆ. ಕಾಂಗ್ರೆಸ್ ನಾಯಕ ಮಿಥುನ್ ರೈ ಟೋಲ್ ಗೇಟ್ ಮೇಲೆ ಹತ್ತಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಪ್ರತಿಭಟನೆಯಲ್ಲಿ ನಿರತರಾಗಿದ್ದ ಮಾಜಿ ವಿಧಾನ್ ಪರಿಷತ್ ಸದಸ್ಯ ಐವನ್ ಡಿಸೋಜಾ, […]

ಸುರತ್ಕಲ್ ಟೋಲ್ ಗೇಟ್ ಶೀಘ್ರ ತೆರವು: ಮುತ್ತಿಗೆ ಕೈ ಬಿಡಲು ಮನವಿ

ಸುರತ್ಕಲ್: ಇಲ್ಲಿನ ಅಕ್ರಮ ಟೋಲ್ ಗೇಟ್ ಅನ್ನು ಇನ್ನೂ ತೆರವುಗೊಳಿಸದಿರುವುದನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಅಕ್ಟೋಬರ್ 18ರಂದು ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಜಿಲ್ಲಾಡಳಿತದ ಪರವಾಗಿ ಪಣಂಬೂರು ಪೊಲೀಸ್ ಉಪ ಆಯುಕ್ತರ ಕಚೇರಿಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಮದನ್ ಮೋಹನ್, ಸುರತ್ಕಲ್ ಟೋಲ್ ಗೇಟ್ ತೆರವು ಪ್ರಕ್ರಿಯೆಯ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿದ್ದು, ಶೀಘ್ರ […]

ಸುರತ್ಕಲ್: ಅಕ್ಟೋಬರ್ 18 ರಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಟೋಲ್ ಗೇಟ್ ಗೆ ಮುತ್ತಿಗೆ

ಸುರತ್ಕಲ್: ಇಲ್ಲಿನ ಎನ್.ಐ.ಟಿ.ಕೆ ಕಾಲೇಜಿನ ಬಳಿ ಇರುವ ಟೋಲ್ ಗೇಟ್ ಆರು ತಿಂಗಳ ತಾತ್ಕಾಲಿಕ ಅವಧಿಗೆ ಆರಂಭಗೊಂಡು ಇದೀಗ ಏಳು ವರ್ಷಗಳನ್ನು ಪೂರೈಸಿದೆ. ಜನರ ವಿರೋಧದ ನಡುವೆಯೂ ಅಕ್ರಮವಾಗಿ, ನಿಯಮಗಳ ಉಲ್ಲಂಘನೆ ನಡೆಸಿ ಜನರಿಂದ ಬಲವಂತವಾಗಿ ಹಣ ಕೀಳುತ್ತಿರುವ ವಿರುದ್ದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ದ.ಕ ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಸೇರಿ ಅಕ್ಟೋಬರ್ 18 ರಂದು ಬೆಳಗ್ಗೆ 9.30 ಗಂಟೆಗೆ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು […]

ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಸರಣಿ ಕಾರ್ಯಕ್ರಮ

ಮಂಗಳೂರು: ಸಣ್ಣ ಅವಕಾಶದಿಂದ ಆಗಸದಷ್ಟು ಸಾಧಿಸಬಹುದು, ಅವಕಾಶವನ್ನುಅರಿಯುವ ಶಕ್ತಿ ನಮ್ಮಲ್ಲಿರಬೇಕು. ಅವಕಾಶಗಳು ಒದಗಿ ಬಂದಾಗ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದುಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ನಿರ್ದೇಶಕ ಅಂಕುಶ್‌ಎನ್. ನಾಯಕ್‌ ಹೇಳಿದರು. ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿವಿಧ ಮಾರ್ಗಗಳು ಮತ್ತು ತಂತ್ರಗಳ ಕುರಿತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಮಂಗಳೂರು ಇವರ ಆಶ್ರಯದಲ್ಲಿ ಕೂಟಕ್ಕಳ ಸಭಾಂಗಣದಲ್ಲಿ ಹಮ್ಮಿಕೊಂಡ “ವೃತ್ತಿ ಮಾರ್ಗದರ್ಶನ ಎಜುಪಾತ್- 2022” ಸರಣಿ ಕಾರ್ಯಕ್ರಮವನ್ನು […]

ಮಾರುಕಟ್ಟೆಗೆ ಬರಲಿದೆ ಗೇರು ಹಣ್ಣಿನ ವೈನ್‌! ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆದ ಎನ್‌ಐಟಿಕೆ ಅಧ್ಯಾಪಕ

ಸುರತ್ಕಲ್: ಸುರತ್ಕಲ್‌ನ ಎನ್‌ಐಟಿಕೆ ಅಧ್ಯಾಪಕರೊಬ್ಬರು ಗೇರು ಹಣ್ಣು ಮತ್ತು ಒಣದ್ರಾಕ್ಷಿಗಳನ್ನು ಬಳಸಿ ವೈನ್ ಉತ್ಪಾದಿಸಲು ಪೇಟೆಂಟ್ ಪಡೆದಿದ್ದಾರೆ. ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಪ್ರಸನ್ನ ಬೇಲೂರು ದೇವರಭಟ್ಟ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಪೇಟೆಂಟ್‌ಗೆ ‘ಗೋಡಂಬಿ ಸೇಬು ಮತ್ತು ಒಣದ್ರಾಕ್ಷಿಗಳಿಂದ ಆಲ್ಕೊಹಾಲ್ಯುಕ್ತ ಪಾನೀಯವನ್ನು ಉತ್ಪಾದಿಸುವ ಪ್ರಕ್ರಿಯೆ ಮತ್ತು ಅದರಿಂದ ಉತ್ಪತ್ತಿಯಾಗುವ ಆಲ್ಕೊಹಾಲ್ಯುಕ್ತ ಪಾನೀಯ’ ಎಂದು ಶೀರ್ಷಿಕೆ ನೀಡಲಾಗಿದೆ. 2012 ರಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿತ್ತು ಮತ್ತು ಮೇ 4, 2022 ರಂದು ಪೇಟೆಂಟ್ ದೊರಕಿದೆ. ಡಾ ಬೇಲೂರ್ […]