ನಿಷೇಧಿತ ಖಲಿಸ್ತಾನಿ ಸಂಘಟನೆಯ ಉಗ್ರನ ಆಸ್ತಿ ಮುಟ್ಟುಗೋಲು ಹಾಕಿದ ಎನ್. ಐ.ಎ
ನವದೆಹಲಿ: ನಿಷೇಧಿತ ಖಲಿಸ್ತಾನಿ ಪರವಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಸದಸ್ಯ, ಗೊತ್ತುಪಡಿಸಿದ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಆಸ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮುಟ್ಟುಗೋಲು ಹಾಕಿಕೊಂಡಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA), 1967 ರ ಸೆಕ್ಷನ್ 33 (5) ಅಡಿಯಲ್ಲಿ ಪನ್ನುನ್‌ಗೆ ಸೇರಿದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಎನ್‌ಐಎ ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಯುಎಪಿಎ ಸೆಕ್ಷನ್ 33(5) ಅಡಿಯಲ್ಲಿ ತಲೆಮರೆಸಿಕೊಂಡಿರುವ ಮತ್ತು ಆರೋಪಿಗಳ ಆಸ್ತಿಯನ್ನು […]
ಜೂನ್ 30ರೊಳಗೆ ಶರಣಾಗಿ; ಇಲ್ಲದಿದ್ದರೆ ಮನೆ ಜಪ್ತಿಗೆ ತಯಾರಾಗಿ: ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳಿಗೆ ಎನ್.ಐ.ಎ ವಾರ್ನಿಂಗ್
ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳು ಸ್ವಯಂ ಪ್ರೇರಿತವಾಗಿ ಜೂನ್.30ರೊಳಗೆ ಹಾಜರಾಗಬೇಕು ಎಂದು ಎನ್‌ಐಎ ಕೋರ್ಟ್ ಆದೇಶ ಹೊರಡಿಸಿದೆ. ಒಂದು ವೇಳೆ ಜೂನ್.30ರೊಳಗೆ ಶರಣಾಗದಿದ್ದಲ್ಲಿ ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡಲಾಗುವುದು ಎಂದು ಎನ್‌ಐಎ ಕೋರ್ಟ್ ಹೇಳಿದೆ. ಈ ಬಗ್ಗೆ ಸುಳ್ಯದಲ್ಲಿ ಧ್ವನಿವರ್ಧಕದ ಮೂಲಕ ಸಂದೇಶ ನೀಡಲಾಗಿದೆ. ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಮಾಡಿದ ಆರೋಪಿಗಳ ಸುಳಿವು ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿದೆ. 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ […]
ಸೇನಾ ಟ್ರಕ್ ಮೇಲೆ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮ: ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆಗೆ ಎನ್.ಐ.ಎ ಸಾಥ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಸೇನಾ ಟ್ರಕ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಸೇನಾ ವಾಹನದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಐವರು ಯೋಧರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್, ಸಿಪಾಯಿ ಸೇವಕ್ ಸಿಂಗ್, ಹವಾಲ್ದಾರ್ ಮನದೀಪ್ ಸಿಂಗ್, ಲ್ಯಾನ್ಸ್ ನಾಯಕ್ ದೇಬಶಿಶ್ ಬಸ್ವಾಲ್ ಹಾಗೂ ಸಿಪಾಯಿ ಹರಕೃಷ್ಣ ಸಿಂಗ್ ಮೃತಪಟ್ಟ ಯೋಧರು. ಯೋಧರು ಸಾಗುತ್ತಿದ್ದ ಟ್ರಕ್‌ಗೆ […]
ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ: ಉಡುಪಿಯಲ್ಲಿ ಎನ್.ಐ.ಎ ತನಿಖೆ
ಉಡುಪಿ: ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಇಲ್ಲಿನ ವಿದ್ಯಾರ್ಥಿ ರಿಹಾನ್ ಶೇಖ್ ಎಂಬಾತನ ಫ್ಲಾಟ್ ಅನ್ನು ಪರಿಶೀಲನೆ ನಡೆಸಿದ್ದಾರೆ. ಕುಕ್ಕರ್ ಸ್ಫೋಟದ ಆರೋಪಿಗಳೊಂದಿಗೆ ರಿಹಾನ್ ಶೇಖ್ ನ ಶಂಕಿತ ಸಂಪರ್ಕದ ಆಧಾರದಲ್ಲಿ ಆತನ ಫ್ಲಾಟ್ ಅನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಕೊಣಾಜೆ ನಡುಪದವು ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ ರಿಹಾನ್ ಉಡುಪಿಯ ಬ್ರಹ್ಮಾವರ ಮೂಲದವನಾಗಿದ್ದಾನೆ. ಆತನ ಪೋಷಕರು ವಾರಂಬಳ್ಳಿಯ ಮೀನಾ ಅನ್ಮೋಲ್ ವಸತಿ ಗೃಹದ ಕಟ್ಟಡದಲ್ಲಿ ವಾಸಮಾಡಿಕೊಂಡಿದ್ದರೆ, ರಿಹಾನ್ ಮಂಗಳೂರಿನ ಬಲ್ಮಠದಲ್ಲಿ ವಾಸವಾಗಿದ್ದನು. ಅಧಿಕಾರಿಗಳು ಕೆಲವು ದಾಖಲೆಗಳನ್ನು […]
ಕನ್ಹಯ್ಯ ಲಾಲ್ ತೇಲಿ ಹತ್ಯೆ ಪ್ರಕರಣ: 11 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಐಎ
ನವದೆಹಲಿ: ಈ ವರ್ಷ ಜೂನ್ 28 ರಂದು ಇಬ್ಬರು ಭಯೋತ್ಪಾದಕರಿಂದ ಕನ್ಹಯ್ಯ ಲಾಲ್ ತೇಲಿ ಎಂಬ ಟೈಲರ್ ನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಗುರುವಾರ ರಾಜಸ್ಥಾನದ ಜೈಪುರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (ಆರ್‌ಸಿ-27/2022/ಎನ್‌ಐಎ/ಡಿಎಲ್‌ಐ) ಸಲ್ಲಿಸಿದೆ. ರಿಯಾಜ್ ಅಟ್ಟಾರಿ ಮತ್ತು ಗೋಸ್ ಮೊಹಮ್ಮದ್ ಎನ್ನುವ ಆರೋಪಿಗಳು ದೇಶಾದ್ಯಂತ ಜನಸಾಮಾನ್ಯರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಲು ಸಾಮಾಜಿಕ ಮಾಧ್ಯಮದಲ್ಲಿ ಹತ್ಯೆಯ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಭಯೋತ್ಪಾದಕ […]