ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ: ರಾಜ್ಯದಲ್ಲಿನ 5 ವರ್ಷದೊಳಗಿನ ಪ್ರತಿ ಮೂರನೇ ಮಗುವಿನ ಬೆಳವಣಿಗೆ ಕುಂಠಿತ
ಬೆಂಗಳೂರು: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ಮತ್ತು ಕ್ಷೀರ ಭಾಗ್ಯದಂತಹ ರಾಜ್ಯ ಸರ್ಕಾರದ ಯೋಜನೆಗಳ ಹೊರತಾಗಿಯೂ, ಕರ್ನಾಟಕದಲ್ಲಿ ಐದು ವರ್ಷದೊಳಗಿನ 35% ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಮೇ 3 ರಂದು ಬಿಡುಗಡೆ ಮಾಡಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ರ ಪ್ರಕಾರ, ರಾಜ್ಯದಲ್ಲಿನ 5 ವರ್ಷದೊಳಗಿನ ಪ್ರತಿ ಮೂರನೇ ಮಗುವಿನ ಬೆಳವಣಿಗೆ ಕುಂಠಿತವೆಂದು ತಿಳಿಸಲಾಗಿದೆ. ತೆಳ್ಳಗಿನ ತಾಯಂದಿರಿಗೆ ಜನಿಸುವ ಮಕ್ಕಳು ಕುಂಠಿತಗೊಳ್ಳುತ್ತಾರೆ ಮತ್ತು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಕುಂಠಿತಗೊಳ್ಳುವಿಕೆಯ ಪ್ರಮಾಣ ಹೆಚ್ಚಾಗಿರುತ್ತದೆ. ವಯಸ್ಸಿಗಿಂತ ಗಿಡ್ಡವಾಗಿರುವುದು ಅಥವಾ […]