ಕಾಡು ಬೆಳೆಸುವುದು ನಮ್ಮ ಸಂಸ್ಕೃತಿ: ಉದಯ ಕುಮಾರ್ ಶೆಟ್ಟಿ

ಉಡುಪಿ: ಪ್ರತಿಯೊಂದು ಮರವನ್ನು ಕೂಡ ನೂರಾರು ಸಂಖ್ಯೆಯ ಜೀವಿಗಳು ಅವಲಂಬಿಸಿಕೊಂಡಿರುತ್ತದೆ. ಮರಗಳನ್ನು, ಕಾಡನ್ನು ಬೆಳೆಸುವುದು ನಮ್ಮ ಸಂಸ್ಕೃತಿ.  ಅದು‌ ಪಾಶ್ಚಿಮಾತ್ಯರಿಂದ ಆಮದು‌ ಮಾಡಿಕೊಂಡಿರುವ ಗಾರ್ಡನ್‌ ವ್ಯವಸ್ಥೆ ಅಲ್ಲ  ಎಂದು ಪಿಲಿಕುಲ ಔಷಧಿ ವನದ ಮೇಲ್ವಿಚಾರಕ ಉದಯ ಕುಮಾರ್‌ ಶೆಟ್ಟಿ ಹೇಳಿದರು. ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾದ ಒಂದು ಸಾವಿರ ಸಸಿಗಳನ್ನು ನೆಟ್ಟು ಮತ್ತು ಮುಂದಿನ ಐದು ವರ್ಷಗಳ ಕಾಲ ಅವುಗಳನ್ನು ಪೋಷಿಸುವ […]