ಎಂಥಾ ಅವಸ್ಥೆ ಮಾರ್ರೆ ಈ ರಸ್ತೆದು !   ಬೈಲೂರು- ಪಳ್ಳಿ ರಸ್ತೆ ಕಾಮಗಾರಿ ಅರ್ಧದಲ್ಲೇ ಸ್ಟಾಪ್: ಪ್ರಯಾಣಿಕರ ಬೈಗುಳ Non stop

ಕಾರ್ಕಳ: ಬೈಲೂರು ಮತ್ತು ಪಳ್ಳಿ ಗ್ರಾ.ಪಂ.ಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಮಗಾರಿ ಪ್ರಾರಂಭಗೊಂಡು ವರ್ಷ ಕಳೆದರೂ ಅರ್ಧದಷ್ಟೂ ಕಾಮಗಾರಿ ನಡೆಯದೆ ಪ್ರಯಾಣಿಕರುಸಂಕಟಪಡುತ್ತಿದ್ದಾರೆ. ಸುಮಾರು 3.5 ಕಿ.ಮೀ. ಉದ್ದವಿರುವ ಈ ರಸ್ತೆ ಕಾಂಕ್ರಿಟೀಕರಣಕ್ಕೆ ಕೇಂದ್ರ ರಸ್ತೆನಿಧಿ ಯೋಜನೆಯ 4 ಕೋಟಿ ಅನುದಾನ ಒದಗಿಸಲಾಗಿತ್ತು. ಕುಂಟುತ್ತ ಸಾಗಿದ ಕಾಮಗಾರಿ ಈಗ ಸಂಪೂರ್ಣ ಸ್ಥಗಿತವಾಗಿದೆ. ಕಾಮಗಾರಿಗಾಗಿ ಹಿಂದಿದ್ದ ಡಾಮಾರು ರಸ್ತೆ ಅಗೆಯಲಾಗಿದ್ದು, ಈಗ ವಾಹನ ಸಂಚಾರ ದುಸ್ತರವಾಗಿದೆ.   ಈ ರಸ್ತೆಯ ಮೂಲಕ ಪಳ್ಳಿ, ಬೆಳ್ಳೆ, ಉಡುಪಿ ಮಾರ್ಗವಾಗಿ ಬಹಳಷ್ಟು ಬಸ್ಸುಗಳು ಸೇರಿದಂತೆ […]