ಬೈಲೂರು: ಪಡಿತರ ನೀಡಲು ಹಿಂದೇಟು: ಅಂಗಡಿ ಮಾಲಿಕನ ವಿರುದ್ದ ತಿರುಗಿಬಿದ್ದ ಸ್ಥಳೀಯರು

ಕಾರ್ಕಳ: ಪಡಿತರ ನೀಡಲು ವಿವಿಧ ನೆಪಗಳನ್ನು ನೀಡಿ ಹಿಂದೇಟು ಹಾಕುತ್ತಿದ್ದ ಅಂಗಡಿ ಮಾಲಿಕನ ವಿರುದ್ದ ಸಾರ್ವಜನಿಕರು ತಿರುಗಿಬಿದ್ದ ಘಟನೆ ಕಾರ್ಕಳ ತಾಲೂಕಿನ ಬೈಲೂರು ಕಾಂತರಗೋಳಿಯಲ್ಲಿ ನಡೆದಿದೆ. ಎರ್ಲಪಾಡಿ ಗ್ರಾಮದ ಕಾಂತರಗೋಳಿಯಲ್ಲಿರುವ ನ್ಯಾಯ ಬೆಲೆ ಅಂಗಡಿಯಲ್ಲಿ ಹಿಂದಿನಿಂದಲೂ ಹಲವು ದೂರು ಕೇಳಿ ಬಂದಿದ್ದವು. ಇದೀಗ ಕೋರೋನೊ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಅಗಿದ್ದು. ಬಡವರಿಗೆ ಪಡಿತರ ವಿತರಣೆಯ ಜವಬ್ದಾರಿ ಹೊಂದಿದ್ದರೂ ಒಟಿಪಿ ಸರಿಯಿಲ್ಲ, ಸರ್ವರ್ ಸರಿ ಇಲ್ಲ ಎಂದು ಸ್ಥಳೀಯರನ್ನು ನಿರ್ಲಕ್ಷ ಮಾಡುವ ಮೂಲಕ ಪಡಿತರ ವಿತರಣೆ ಮಾಡಿಲ್ಲ […]