udupixpress
Home Trending ಬೈಲೂರು: ಪಡಿತರ ನೀಡಲು ಹಿಂದೇಟು: ಅಂಗಡಿ‌ ಮಾಲಿಕನ‌ ವಿರುದ್ದ ತಿರುಗಿಬಿದ್ದ ಸ್ಥಳೀಯರು

ಬೈಲೂರು: ಪಡಿತರ ನೀಡಲು ಹಿಂದೇಟು: ಅಂಗಡಿ‌ ಮಾಲಿಕನ‌ ವಿರುದ್ದ ತಿರುಗಿಬಿದ್ದ ಸ್ಥಳೀಯರು

ಕಾರ್ಕಳ: ಪಡಿತರ ನೀಡಲು ವಿವಿಧ ನೆಪಗಳನ್ನು ನೀಡಿ ಹಿಂದೇಟು ಹಾಕುತ್ತಿದ್ದ ಅಂಗಡಿ ಮಾಲಿಕನ ವಿರುದ್ದ ಸಾರ್ವಜನಿಕರು ತಿರುಗಿಬಿದ್ದ ಘಟನೆ ಕಾರ್ಕಳ ತಾಲೂಕಿನ‌ ಬೈಲೂರು ಕಾಂತರಗೋಳಿಯಲ್ಲಿ ನಡೆದಿದೆ.
ಎರ್ಲಪಾಡಿ ಗ್ರಾಮದ ಕಾಂತರಗೋಳಿಯಲ್ಲಿರುವ ನ್ಯಾಯ ಬೆಲೆ ಅಂಗಡಿಯಲ್ಲಿ‌ ಹಿಂದಿನಿಂದಲೂ ಹಲವು ದೂರು ಕೇಳಿ ಬಂದಿದ್ದವು. ಇದೀಗ ಕೋರೋನೊ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಅಗಿದ್ದು. ಬಡವರಿಗೆ ಪಡಿತರ ವಿತರಣೆಯ ಜವಬ್ದಾರಿ ಹೊಂದಿದ್ದರೂ ಒಟಿಪಿ ಸರಿಯಿಲ್ಲ, ಸರ್ವರ್ ಸರಿ ಇಲ್ಲ ಎಂದು ಸ್ಥಳೀಯರನ್ನು ನಿರ್ಲಕ್ಷ ಮಾಡುವ ಮೂಲಕ ಪಡಿತರ ವಿತರಣೆ ಮಾಡಿಲ್ಲ ಎಂದು ದೂರು  ಮಾಲಕರನ ವಿರುದ್ದ ಕೇಳಿಬಂದಿದೆ. ಮಾಲಿಕನ‌ ಈ ನಡೆಯಿಂದ ಜನರು ರೋಸಿಹೋಗಿದ್ದರು.
ಮಂಗಳವಾರ ಬೆಳಿಗ್ಗೆ ಸ್ಥಳೀಯರಾದ ಸುಚೀಂದ್ರ ನಾಯಕ್, ಸತ್ಯಪ್ರಸಾದ್ ಆಚಾರ್ಯ, ಪ್ರವೀಣ್ ಪೂಜಾರಿ, ಪ್ರಶಾಂತ್ ಶೆಟ್ಟಿ, ನಿಕ್ಷೀತ್ ಪೂಜಾರಿ, ಶ್ರೀನಿವಾಸ್ ಪೂಜಾರಿ ಎನ್ನುವವರು, ಪಂಚಾಯತ್ ಪಿಡಿಓ ಹಾಗೂ ಕಾರ್ಯದರ್ಶಿಗಳನ್ನು ಸ್ಥಳಕ್ಕೆ‌ ಕರೆಯಿಸಿ, ಅಂಗಡಿ ಮಾಲಿಕನಿಗೆ ಬುದ್ದಿ ಹೇಳಿಸಿದ್ದಾರೆ. ಕೊನೆಗೆ ಎಲ್ಲರಿಗೂ ಪಡಿತರ ನೀಡಲಾಗಿದೆ.
error: Content is protected !!