ಮಂಡಗದ್ದೆ: ಬಸ್ ನಿರ್ವಾಹಕನಿಗೆ ಮಾರಣಾಂತಿಕ ಹಲ್ಲೆ

ಉಡುಪಿ: ಕಾರಿಗೆ ಸೈಡ್ ಕೊಡದ ವಿಚಾರಕ್ಕೆ ಸಂಬಂಧಿಸಿ ತೀರ್ಥಹಳ್ಳಿ ತಾಲ್ಲೂಕಿನ ಮಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಗದ್ದೆ ಎಂಬಲ್ಲಿ ಖಾಸಗಿ ಬಸ್ ನ ನಿರ್ವಾಹಕರೊಬ್ಬರಿಗೆ ಎಂಟು ಮಂದಿಯ ತಂಡ ಮರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಜೂನ್ 30ರಂದು ಸಂಜೆ 6.30ರ ಸುಮಾರಿಗೆ ನಡೆದಿದ್ದು, ಬಸ್ ನಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಾವಳಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ […]