CEA ವರದಿ : 86 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕನಿಷ್ಠ ಮಟ್ಟಕ್ಕಿಳಿದ ಕಲ್ಲಿದ್ದಲು ದಾಸ್ತಾನು

ನವದೆಹಲಿ: ಆಮದು ಮಾಡಿಕೊಳ್ಳಲಾದ ಆರು ಒಣ ಇಂಧನ ಆಧರಿತ ಸ್ಥಾವರಗಳು ಸೇರಿದಂತೆ ದೇಶದ 86 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಅಕ್ಟೋಬರ್ 18ರ ವೇಳೆಗೆ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಇಎ) ವರದಿ ತಿಳಿಸಿದೆ.ಈ ಸ್ಥಾವರಗಳಲ್ಲಿ ಇರಬೇಕಾಗಿದ್ದ ಸಾಮಾನ್ಯ ಮಟ್ಟಕ್ಕಿಂತ ಶೇ 25 ರಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು ಇದ್ದು, ಇವುಗಳನ್ನು ಕನಿಷ್ಠ ಇಂಧನ ದಾಸ್ತಾನು ಹೊಂದಿರುವ ಸ್ಥಾವರಗಳ ಪಟ್ಟಿಗೆ ಸೇರಿಸಲಾಗಿದೆ.ದೇಶದ ಹಲವಾರು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಸಾಮಾನ್ಯಕ್ಕಿಂತ […]