ಚುನಾವಣಾ ಆಯೋಗಕ್ಕೆ ಸಚಿನ್ ತೆಂಡೂಲ್ಕರ್ ‘ರಾಷ್ಟ್ರೀಯ ರಾಯಭಾರಿ’ : ಮತದಾನ ಹೆಚ್ಚಿಸಲು ಕ್ರಮ
ನವದೆಹಲಿ: 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಚಿನ್ ಮತದಾನ ಜಾಗೃತಿ ಮೂಡಿಸಲು ಕೇಂದ್ರ ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ದೇಶದ ನಾಗರಿಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಿದ್ದಾರೆ. ‘ಶತಕಗಳ ಶತಕ’ ಗಳಿಸಿದ ಮಹೋನ್ನತ ದಾಖಲೆ ಹೊಂದಿರುವ ಸಚಿನ್, ಮುಂದಿನ ಚುನಾವಣೆಯಲ್ಲಿ ಯುವ ಮತ್ತು ಮೊದಲ ವೋಟರ್ಗಳಿಗೆ ಸ್ಫೂರ್ತಿ ತುಂಬಲಿದ್ದಾರೆ.ಭಾರತ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಎಂಬುದೊಂದು ದೊಡ್ಡ ಅಧ್ಯಾಯ. ಕೋಟ್ಯಂತರ ಅಭಿಮಾನಿಗಳ ಕಣ್ಮಣಿ. ಸಚಿನ್ ಆಟವನ್ನು ನೋಡಿ ಬೆಳೆದವರು ಇಂದು […]