ಜೆಲ್ ಆವಿಷ್ಕಾರ : ಮಧುಮೇಹಿಗಳ ಗಾಯ 3 ಪಟ್ಟು ಬೇಗ ಗುಣಪಡಿಸುವ ಚಿಕಿತ್ಸೆ
ನವದೆಹಲಿ: ಮಧುಮೇಹಿಗಳ ಗಾಯವನ್ನು ಬೇಗನೆ ಗುಣಪಡಿಸುವ ಜೆಲ್ ಒಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಅಂಗಛೇದನಗಳ ಪ್ರಮಾಣವನ್ನು ಈ ಜೆಲ್ ಕಡಿಮೆಗೊಳಿಸುವ ಭರವಸೆ ವ್ಯಕ್ತಪಡಿಸಲಾಗಿದೆ.ಈ ಜೆಲ್ ಗಾಯವನ್ನು ಬೇಗನೆ ಗುಣಪಡಿಸುವುದು ಮಾತ್ರವಲ್ಲದೆ ಗಾಯ ಮತ್ತೆ ಮರುಕಳಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.ಮಧುಮೇಹಿಗಳ ಗಾಯವನ್ನು ಬೇಗನೆ ಗುಣಪಡಿಸುವ ಚಿಕಿತ್ಸಾ ವಿಧಾನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ವೈಜ್ಞಾನಿಕ ಜರ್ನಲ್ ಅಡ್ವಾನ್ಸಡ್ ಮೆಟೀರಿಯಲ್ಸ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮ್ಯಾಗ್ನೆಟಿಕ್ ಪ್ರಚೋದನೆಯೊಂದಿಗೆ ಸಂಯೋಜಿಸಲಾದ ಚಿಕಿತ್ಸೆಯು ಪ್ರಸ್ತುತ ಸಾಂಪ್ರದಾಯಿಕ ವಿಧಾನಗಳಿಗಿಂತ ಮೂರು ಪಟ್ಟು ವೇಗವಾಗಿ ಮಧುಮೇಹ ಗಾಯಗಳನ್ನು ಗುಣಪಡಿಸುತ್ತದೆ […]